- Advertisement -
- Advertisement -




ಕಂಟೇನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವೇಳೆ ಕುಮಟಾ ಪೊಲೀಸರು ಜಾನುವಾರು ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ಶನಿವಾರ ಕುಮಟಾ ರಾಷ್ಟ್ರೀಯ ಹೆದ್ದಾರಿ 66ರ ಎಪಿಎಂಸಿ ಬಳಿ ನಡೆದಿದೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳದ ಪಾಲಕ್ಕಾಡ್ ಎಂಬಲ್ಲಿಗೆ ಎಮ್ಮೆಗಳನ್ನು ಕೊಂಡೊಯ್ಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕುಮಟಾ ಪೊಲೀಸರು ದಾಳಿ ನಡೆಸಿ ನಾಲ್ವರ ಬಂಧಿಸಿದ್ದಾರೆ.
ಬಂಧಿತರನ್ನು ಮೈಸೂರಿನ ಅಯೂಬ್ ಅಹಮದ್ ರಶೀದ್ (35), ಕೇರಳ ಕಾಸರಗೋಡಿನ ಅಬೂಬಕ್ಕರ್ ಮಹಮ್ಮದ್ (53), ಅಬ್ದುಲ್ ರೆಹಮಾನ್ ಪಲ್ಲಿಯನ್ (60) ಹಾಗೂ ಹಾಸನ ಜಿಲ್ಲೆ ಹೊಳೆನರಸೀಪುರದ ಅಜಗರ್ ಹುಸೈನ್ ಇಶ್ರತ್ ಹುಸೈನ್ (32)ಎಂದು ಗುರುತಿಸಲಾಗಿದೆ.
ಲಾರಿ ಸಹಿತ ಜಾನುವಾರುಗಳ ವಶಕ್ಕೆ ಪಡೆದ ಕುಮಟಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -