Saturday, June 13, 2026
spot_imgspot_img
spot_imgspot_img

ಅಕ್ರಮ ಮದ್ಯ ಸಾಗಾಟ; ವಾಹನ ಸಹಿತ ಆರೋಪಿ ಅರೆಸ್ಟ್‌..!

- Advertisement -
- Advertisement -

ಚಾಮರಾಜನಗರ: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಅಬ್ಕಾರಿ ಅಧಿಕಾರಿಗಳು ಪತ್ತೆ ಹಚ್ಚಿ ವಶಕ್ಕೆ ತೆಗದುಕೊಂಡು ನ್ಯಾಯಾಂಗ ಬಂಧನಕ್ಕೊಳಪಡಿಸಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಯಳಂದೂರು ತಾಲ್ಲೂಕಿನ ಹೊನ್ನೂರು ರಸ್ತೆಯಲ್ಲಿ ಶಿವಸ್ವಾಮಿ ಎಂದು ಗುರುತಿಸಲಾಗಿದೆ.

ಆರೋಪಿ ತಮ್ಮ ದ್ವಿಚಕ್ರ ವಾಹನದಲ್ಲಿ 6 ಲೀಟ‌ರ್ 520 ಮಿ. ಲಿ ಮದ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ಮರೆ ಮಾಚಿ ಸಾಗಾಣಿಕೆ ಮಾಡುತ್ತಿದ್ದಾಗ, ರಸ್ತೆ ಗಸ್ತಿನಲ್ಲಿದ್ದ ಅಬ್ಕಾರಿ ಸಿಬ್ಬಂದಿಗಳಿಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿಯಿಂದ 2918 ರೂ ಮೌಲ್ಯದ ಮದ್ಯ ಹಾಗೂ 70 ಸಾವಿರ ರೂ ಮೌಲ್ಯದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಚಾಮರಾಜನಗರ ವಲಯ ಅಬ್ಕಾರಿ ನಿರೀಕ್ಷಕ ಮಹದೇವ ಸಿ.ಎಂ, ಸಿಬಂಧಿಗಳಾದ ರಘು ಮತ್ತು ನಾಗೇಶ ಹಾಜರಿದ್ದರು.

- Advertisement -

Related news

error: Content is protected !!