Monday, April 29, 2024
spot_imgspot_img
spot_imgspot_img

ಬಂಟ್ವಾಳ: ಟಿಪ್ಪರ್ ಲಾರಿಗಳಲ್ಲಿ ಸಾಗಿಸುತ್ತಿದ್ದ ಅಕ್ರಮ ಮರಳು ಸಾಗಾಟ ಪತ್ತೆ

- Advertisement -G L Acharya panikkar
- Advertisement -

ಬಂಟ್ವಾಳ: ಟಿಪ್ಪರ್ ಲಾರಿಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೇ, ಅಕ್ರಮವಾಗಿ ಮರಳನ್ನು ಕಳವು ಮಾಡಿ ಸಾಗಿಸುತ್ತಿರುವುದನ್ನು ಕಲೈಮಾರ್ ಪಿ ಪೊಲೀಸ್ ಉಪ ನಿರೀಕ್ಷಕರು, ತನಿಖೆ-1 ಬಂಟ್ವಾಳ ನಗರ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಗಳು ಪತ್ತೆಹಚ್ಚಿದ ಘಟನೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪೊನ್ನೋಡಿ ಎಂಬಲ್ಲಿ ನಡೆದಿದೆ.

ಇಂದು ಬೆಳಿಗ್ಗಿನ ಜಾವ, ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪೊನ್ನೋಡಿ ಎಂಬಲ್ಲಿ, KA-21-C-6338 ಹಾಗೂ KA-19-AA-0245 ಟಿಪ್ಪರ್ ಲಾರಿಗಳಲ್ಲಿ ಯಾವುದೇ ಪರವಾನಿಗೆ ಇಲ್ಲದೇ, ಅಕ್ರಮವಾಗಿ ಸರ್ಕಾರದ ಸೊತ್ತಾದ ಮರಳನ್ನು ಕಳವು ಮಾಡಿ ಸಾಗಿಸುತ್ತಿರುವುದನ್ನು ಕಲೈಮಾರ್ ಪಿ ಪೊಲೀಸ್ ಉಪ ನಿರೀಕ್ಷಕರು, ತನಿಖೆ-1 ಬಂಟ್ವಾಳ ನಗರ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿಗಳು ಪತ್ತೆಹಚ್ಚಿದ್ದಾರೆ.

ಸದ್ರಿ ಮರಳಿನ ಬಗ್ಗೆ ಒಂದು ಲಾರಿಯ ಚಾಲಕ ಹಾಗೂ ಮಾಲಕನಾದ ಕೇಪು ಗ್ರಾಮ, ಬಂಟ್ವಾಳ ನಿವಾಸಿ ಮಹಮ್ಮದ್ ಅಫ್ವಾನ್ (26) ಹಾಗೂ ಮತ್ತೊಂದು ಲಾರಿಯ ಚಾಲಕ ಪಜೀರು ಗ್ರಾಮ ಮತ್ತು ಅಂಚೆ, ಉಳ್ಳಾಲ ನಿವಾಸಿ ಬದ್ರು (43) ಎಂಬವರಲ್ಲಿ ವಿಚಾರಿಸಲಾಗಿ, ಮರಳನ್ನು ವಳಚ್ಚಿಲ ಎಂಬಲ್ಲಿಂದ ತುಂಬಿಸಿ ಸಾಗಾಟ ಮಾಡುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಲಾರಿ ಮಾಲಿಕ ಮೊಹಮ್ಮದ್ ಹನೀಫ್, ಮರಳನ್ನು ಒದಗಿಸಿದ ವಳಚ್ಚಿಲ್ ನ ಸತ್ತಾರ್, ಝಾಹಿದ್ ಮತ್ತು ಅತಾವುಲ್ಲಾ ಹಾಗೂ ಲಾರಿ ಚಾಲಕರ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ:- 14/2024 ಕಲಂ: 379 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!