Tuesday, July 21, 2026
spot_imgspot_img
spot_imgspot_img

ಮಧ್ಯಪ್ರಾಚ್ಯ ಯುದ್ಧದ ಪರಿಣಾಮ: ಔಷಧಗಳ ಬೆಲೆ ಶೇ.15 ರಷ್ಟು ಏರಿಕೆ

- Advertisement -
- Advertisement -

ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದ ಬಿಸಿ ಪೆಟೋಲ್, ಡೀಸೆಲ್‌ಗೆ ಅಷ್ಟೇ ಅಲ್ಲದೆ ಔಷಧಗಳ ಮೇಲೆಯೂ ಪರಿಣಾಮ ಬೀರಿದ್ದು, ಔಷಧಗಳ ಬೆಲೆ ಶೇ.15 ರಷ್ಟು ಏರಿಕೆಯಾಗುತ್ತಿದೆ.

ಔಷಧಗಳ ಮಾತ್ರೆಗಳ ತಯಾರಿಕೆಗೆ ಪೆಟ್ರೋಕೆಮಿಕಲ್ಸ್ ಅತ್ಯಗತ್ಯ. ಸಪ್ಲೈ ಚೈನ್ ಮೇಲೆ ಯುದ್ಧದ ಪರಿಣಾಮ ಬೀರಿದ ಕಾರಣ ಔಷಧಗಳ ದರ ಸರಾಸರಿ 15 ರಷ್ಟು ಹೆಚ್ಚಳವಾಗಿದೆ.

ಬಿಪಿ, ಸಕ್ಕರೆ ಕಾಯಿಲೆಯಿಂದ ಹಿಡಿದು ಸಾಮಾನ್ಯ ಜ್ವರದ ಮಾತ್ರೆಗಳ ಬೆಲೆ ಏರಿಕೆಯಾಗಿದ್ದು, ಪ್ಯಾರಸಿಟಮಲ್, ಕಾರ್ಡಿಯಾಕ್ ಡ್ರಗ್ಸ್, ಡಯಾಬಿಟಿಸ್ ಡ್ರಗ್ಸ್, ಗ್ಯಾಸ್ಟ್ರಿಕ್ ಟ್ಯಾಬ್ಲೆಟ್, ಕಾಫ್ ಸಿರಪ್, ಐರನ್ ಟಾನಿಕ್ಸ್ ಸೇರಿ 600ಕ್ಕೂ ಹೆಚ್ಚು ಔಷಧಗಳ ಬೆಲೆ ಹೆಚ್ಚಳವಾಗುತ್ತಿದೆ. ಹಂತ ಹಂತವಾಗಿ ಬ್ಯಾಚ್ ಮಾದರಿಯಲ್ಲಿ ಒಂದೊಂದೇ ಮಾತ್ರೆಗಳ ಬೆಲೆ ಏರಿಕೆ ಮಾಡಲಾಗುತ್ತದೆ.

ಕೇವಲ ಔಷಧಗಳ ಬೆಲೆ ಮಾತ್ರವಲ್ಲ ಕಾಸ್ಮೆಟಿಕ್, ಬೇಬಿ ಪ್ರಾಡಕ್ಟ್ ಗಳ ಬೆಲೆಯೂ ಏರಿಕೆಯಾಗಲಿದೆ. ಹಳೆಯ ಬೆಲೆಯ ಔಷಧ ಹಾಗೂ ಕಾಸ್ಮೆಟಿಕ್ ಸ್ಟಾಕ್ ಖಾಲಿಯಾಗಿ ಹೊಸ ಬ್ಯಾಚ್ ಮಾತ್ರೆಗಳ ಜೊತೆ ಹೊಸ ಏರಿಕೆಯ ದರ ಬರ್ತಿದೆ. ಯುದ್ಧ ಮುಗಿಯುವವರೆಗೂ ಬೆಲೆ ಏರಿಕೆ ಇದ್ದೆ ಇರುತ್ತೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!