Saturday, June 6, 2026
spot_imgspot_img
spot_imgspot_img

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 30.98 ರಷ್ಟು ಹಕ್ಕು ಚಲಾವಣೆ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆಗಳು ಹಾಗೂ ಬಂಟ್ವಾಳ ಪುರಸಭೆಯ 89 ವಾರ್ಡ್ ಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.

ಬೆಳಿಗ್ಗೆ 7 ಗಂಟೆಯಿಂದ ಎಲ್ಲ ವಾರ್ಡ್ ಗಳಲ್ಲಿ ಏಕಕಾಲಕ್ಕೆ ಮತದಾನ ಆರಂಭವಾಯಿತು. ಬೆಳಿಗ್ಗೆ 9 ಗಂಟೆ ವೇಳೆಗೆ ಉಳ್ಳಾಲದಲ್ಲಿ ಶೇಕಡ 13ರಷ್ಟು, ಪುತ್ತೂರಿನಲ್ಲಿ ಶೇ 14ರಷ್ಟು ಮತ್ತು ಬಂಟ್ವಾಳದಲ್ಲಿ ಶೇ 15ರಷ್ಟು ಮತದಾನ ನಡೆದಿದೆ. ಬೆಳಿಗ್ಗೆ 11. 30 ರಷ್ಟರ ಹೊತ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇಕಡ 30.98 ರಷ್ಟು ಮತದಾನವಾಗಿದೆ. ಉಳ್ಳಾಲ ನಗರಸಭೆಯಲ್ಲಿ ಶೇ 28.70ರಷ್ಟು, ಪುತ್ತೂರು ನಗರಸಭೆಯಲ್ಲಿ ಶೇ 30.89 ಮತ್ತು ಬಂಟ್ವಾಳ ಪುರಸಭೆಯಲ್ಲಿ ಶೇ 33.25ರಷ್ಟು ಮತ ಚಲಾವಣೆಯಾಗಿದೆ.

- Advertisement -

Related news

error: Content is protected !!