Saturday, April 27, 2024
spot_imgspot_img
spot_imgspot_img

ಕಾರ್ಮಿಕ ಕಾಲೋನಿಯಲ್ಲಿ ಅಡುಗೆ ಸಿಲಿಂಡರ್ ಸ್ಪೋಟ ನಾಲ್ಕು ಶೆಡ್​ ಬೆಂಕಿಗಾಹುತಿ ..

- Advertisement -G L Acharya panikkar
- Advertisement -

ಅಡುಗೆ ಸಿಲಿಂಡರ್ ಸಿಡಿದು ಬೆಂಕಿಯು ನಾಲ್ಕೈದು ಶೆಡ್‌ಗಳಿಗೆ ವ್ಯಾಪಿಸಿರುವ ಘಟನೆ ಕಾರವಾರದ ಮುದಗಾ ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ ನಡೆದಿದೆ.

ಕಾರವಾರದ ಮುದಗಾ ನೌಕಾನೆಲೆ ಲೇಬರ್ ಕಾಲೋನಿಯ ಶೆಡ್​ನಲ್ಲಿ ಅಡುಗೆ ಮಾಡುವಾಗ ಸಿಲಿಂಡರ್​ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ನಾಲ್ಕೈದು ಶೆಡ್​ಗಳಿಗೆ ವ್ಯಾಪಿಸಿಕೊಂಡು ಧಗ ಧಗ ಉರಿದಿದೆ. ಈ ಶೆಡ್​ಗಳೆಲ್ಲ ನೌಕಾನೆಲೆಯ ಎನ್‌ಸಿಸಿ ಗುತ್ತಿಗೆ ಕಂಪನಿಯ ಕಾರ್ಮಿಕರ ಶೆಡ್‌ಗಳು ಆಗಿವೆ. ಇನ್ನು ಬೆಂಕಿ ಹೊತ್ತಿ ಉರಿದಿದ್ದರಿಂದ ಶೆಡ್​​ನಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿವೆ.

ಇನ್ನು ಸ್ಫೋಟದ ಶಬ್ಧ ಕೇಳುತ್ತಿದ್ದಂತೆ ಅಕ್ಕ-ಪಕ್ಕದ ಶೆಡ್​ನಲ್ಲಿದ್ದವರೆಲ್ಲ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಒಂದು ಸಾಲಿನಲ್ಲಿ 150ಕ್ಕೂ ಹೆಚ್ಚು ಶೆಡ್​ಗಳಿದ್ದು ಅದರಲ್ಲಿ ನಾಲ್ಕೈದಕ್ಕೆ ಮಾತ್ರ ಬೆಂಕಿ ವ್ಯಾಪಿಸಿದೆ. ತಕ್ಷಣ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

- Advertisement -

Related news

error: Content is protected !!