

ಪುತ್ತೂರು :ಪಾಂಗ್ಲಾಯಿ ಬೆಥನಿ ಅಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಸಂಸತಿನ ಉದ್ಘಾಟನೆಯು, ಸಿಸ್ಟರ್ ಸೆಲಿನ್ ಪೇತ್ರಾ ರವರ ಅಧ್ಯಕ್ಷತೆಯಲ್ಲಿ, ಮುಖ್ಯ ಅತಿಥಿಯವರಾದ ಸಿಸ್ಟರ್ ವೆನಿಶಾ ಬಿ.ಎಸ್. ಮುಖ್ಯೋಪಾದ್ಯಾಯಿನಿ ಲಿಟಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ, ಹಾಗೂ ಎಲ್ಲಾ ಸಹ ಶಿಕ್ಷಕರ ಸಹಕಾರದಲ್ಲಿ ನಡೆಸಲಾಯಿತು.
2024-2025ನೇ ಸಾಲಿನ ಶಾಲಾ ನಾಯಕಿಯಾಗಿ ಪ್ರಾಪ್ತಿ ಎಸ್. ಗೌಗಿ ಹಾಗೂ ಉಪನಾಯಕನಾಗಿ ಮಹಮ್ಮದ್ ಅಕ್ಮಲ್ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯವರಾದ, ಭಗಿನಿ ವೆನಿಶಾ ಬಿ. ಎಸ್ ಇವರು ಎಲ್ಲ ಮಂತ್ರಿಮಂಡಲದ ಸದಸ್ಯರಿಗೆ ಪದಕ ಪ್ರಧಾನ ಮಾಡಿ ಗೌರವಿಸಿ, ಒಂದು ಬೆರಳಿನಿಂದ ಯಾವುದೇ ಕೆಲಸ ಮಾಡಲು ಅಸಾಧ್ಯ ಕೈಯಲ್ಲಿರುವ ಎಲ್ಲಾ ಬೆರಳುಗಳು ಸೇರಿದರೆ ಕೆಲಸವು ಸಾಧ್ಯ ಎಂದು, ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಕಿವಿಮಾತಿನೊಂದಿಗೆ ಶುಭ ಹಾರೈಸಿ ಆಶೀರ್ವದಿಸಿದರು.
ಅಧ್ಯಕ್ಷ ಸ್ಥಾನವನ್ನು ವಹಿಸಿರುವ ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಸೆಲಿನ್ ಪೇತ್ರಾ ಎಲ್ಲಾ ಮಂತ್ರಿ ಮಂಡಲದ ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ರೇಣುಕ ಸ್ವಾಗತಿಸಿ, ಕವಿತಾ ರವರು ವಂದಿಸಿ, ಅನಿತಾ ಸಿಯಾ ರವರು ನಿರೂಪಿಸಿದರು.