- Advertisement -
- Advertisement -
ಈ ಬಾರಿಯ ಪ್ಯಾರಾಲಿಂಪಿಕ್ಸ್ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತ ದಾಖಲೆಯ 29 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚು ಸೇರಿವೆ. ವಾಸ್ತವವಾಗಿ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇಷ್ಟು ಸಂಖ್ಯೆಯ ಪದಕಗಳನ್ನು ಗೆದ್ದಿದ್ದು, ಇದೇ ಮೊದಲು. ಇದಕ್ಕೂ ಮೊದಲು ಟೊಕಿಯೋ ಪ್ಯಾರಾಲಿಂಪಿಕ್ನಲ್ಲಿ 19 ಪದಕಗಳನ್ನು ಗೆದ್ದಿದ್ದು, ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು.
ಭಾರತದ ಪದಕಗಳ ಪಟ್ಟಿ ..
- ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 (ಶೂಟಿಂಗ್) ನಲ್ಲಿ ಅವನಿ ಲೆಖರಾ – ಚಿನ್ನ
- ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್‌ಎಚ್1 (ಶೂಟಿಂಗ್) ನಲ್ಲಿ ಮೋನಾ ಅಗರ್ವಾಲ್ – ಕಂಚು
- ಮಹಿಳೆಯರ 100 ಮೀ ಟಿ35 (ಅಥ್ಲೆಟಿಕ್ಸ್) ನಲ್ಲಿ ಪ್ರೀತಿ ಪಾಲ್ – ಕಂಚು
- ಪುರುಷರ 10 ಮೀಟರ್ ಏರ್ ಪಿಸ್ತೂಲ್ SH1 (ಶೂಟಿಂಗ್) ನಲ್ಲಿ ಮನೀಶ್ ನರ್ವಾಲ್ – ಬೆಳ್ಳಿ
- ಮಹಿಳೆಯರ 10ಮೀ ಏರ್ ಪಿಸ್ತೂಲ್ SH1 (ಶೂಟಿಂಗ್) ನಲ್ಲಿ ರುಬಿನಾ ಫ್ರಾನ್ಸಿಸ್ – ಕಂಚು
- ಮಹಿಳೆಯರ 200 ಮೀ ಟಿ35 (ಅಥ್ಲೆಟಿಕ್ಸ್) ನಲ್ಲಿ ಪ್ರೀತಿ ಪಾಲ್ – ಕಂಚು
- ಪುರುಷರ ಹೈಜಂಪ್ ಟಿ47 (ಅಥ್ಲೆಟಿಕ್ಸ್)ನಲ್ಲಿ ನಿಶಾದ್ ಕುಮಾರ್ – ಬೆಳ್ಳಿ
- ಪುರುಷರ ಡಿಸ್ಕಸ್ ಥ್ರೋ F56 (ಅಥ್ಲೆಟಿಕ್ಸ್) ನಲ್ಲಿ ಯೋಗೇಶ್ ಕಥುನಿಯಾ – ಬೆಳ್ಳಿ
- ಪುರುಷರ ಸಿಂಗಲ್ಸ್ SL3 (ಬ್ಯಾಡ್ಮಿಂಟನ್) ನಲ್ಲಿ ನಿತೇಶ್ ಕುಮಾರ್ – ಚಿನ್ನ
- ಮಹಿಳೆಯರ ಸಿಂಗಲ್ಸ್ SU5 (ಬ್ಯಾಡ್ಮಿಂಟನ್) ನಲ್ಲಿ ತುಳಸಿಮತಿ ಮುರುಗೇಶನ್ – ಬೆಳ್ಳಿ
- ಮಹಿಳೆಯರ ಸಿಂಗಲ್ಸ್ SU5 (ಬ್ಯಾಡ್ಮಿಂಟನ್) ಮನೀಶಾ ರಾಮದಾಸ್ – ಕಂಚು
- ಪುರುಷರ ಸಿಂಗಲ್ಸ್ SL4 (ಬ್ಯಾಡ್ಮಿಂಟನ್) ಸುಹಾಸ್ ಯತಿರಾಜ್ – ಬೆಳ್ಳಿ
- ಮಿಶ್ರ ತಂಡ ಕಾಂಪೌಂಡ್ ಓಪನ್ (ಆರ್ಚರಿ) ರಾಕೇಶ್ ಕುಮಾರ್ – ಶೀತಲ್ ದೇವಿ – ಕಂಚು
- ಪುರುಷರ ಜಾವೆಲಿನ್ F64 (ಅಥ್ಲೆಟಿಕ್ಸ್) ಸುಮಿತ್ ಆಂಟಿಲ್– ಚಿನ್ನ
- ಮಹಿಳೆಯರ ಸಿಂಗಲ್ಸ್ SH6 (ಬ್ಯಾಡ್ಮಿಂಟನ್) ನಲ್ಲಿ ನಿತ್ಯ ಶ್ರೀ ಶಿವನ್ – ಕಂಚು
- ಮಹಿಳೆಯರ 400 ಮೀ ಟಿ20 (ಅಥ್ಲೆಟಿಕ್ಸ್) ನಲ್ಲಿ ದೀಪ್ತಿ ಜೀವನ್ಜಿ – ಕಂಚು
- ಪುರುಷರ ಜಾವೆಲಿನ್ F46 (ಅಥ್ಲೆಟಿಕ್ಸ್) ನಲ್ಲಿ ಸುಂದರ್ ಸಿಂಗ್ ಗುರ್ಜರ್ – ಕಂಚು
- ಪುರುಷರ ಜಾವೆಲಿನ್ F46 (ಅಥ್ಲೆಟಿಕ್ಸ್) ನಲ್ಲಿ ಅಜೀತ್ ಸಿಂಗ್ – ಬೆಳ್ಳಿ
- ಪುರುಷರ ಹೈಜಂಪ್ T63 (ಅಥ್ಲೆಟಿಕ್ಸ್) ನಲ್ಲಿ ಮರಿಯಪ್ಪನ್ ತಂಗವೇಲು – ಕಂಚು
- ಪುರುಷರ ಹೈ ಜಂಪ್ T63 (ಅಥ್ಲೆಟಿಕ್ಸ್) ನಲ್ಲಿ ಶರದ್ ಕುಮಾರ್ – ಬೆಳ್ಳಿ
- ಪುರುಷರ ಶಾಟ್ ಪುಟ್ F46 (ಅಥ್ಲೆಟಿಕ್ಸ್) ನಲ್ಲಿ ಸಚಿನ್ ಖಿಲಾರಿ – ಬೆಳ್ಳಿ
- ಪುರುಷರ ವೈಯಕ್ತಿಕ ರಿಕರ್ವ್ (ಆರ್ಚರಿ) ಹರ್ವಿಂದರ್ ಸಿಂಗ್– ಚಿನ್ನ
- ಪುರುಷರ ಕ್ಲಬ್ ಥ್ರೋ 51 (ಅಥ್ಲೆಟಿಕ್ಸ್) ನಲ್ಲಿ ಧರಂಬೀರ್ – ಚಿನ್ನ
- ಪುರುಷರ ಕ್ಲಬ್ ಥ್ರೋ 51 (ಅಥ್ಲೆಟಿಕ್ಸ್) ನಲ್ಲಿ ಪ್ರಣವ್ ಸೂರ್ಮಾ – ಬೆಳ್ಳಿ
- ಜೂಡೋ ಪುರುಷರ 60 ಕೆಜಿ ವಿಭಾಗದಲ್ಲಿ ಕಪಿಲ್ ಪರ್ಮಾರ್ – ಕಂಚು
- ಟಿ64 ಹೈಜಂಪ್ (ಅಥ್ಲೆಟಿಕ್ಸ್) ಪ್ರವೀಣ್ ಕುಮಾರ್ – ಚಿನ್ನ
- ಪುರುಷರ ಶಾಟ್‌ಪುಟ್ F57 (ಅಥ್ಲೆಟಿಕ್ಸ್) ಹೊಕಾಟೊ ಸೆಮಾ – ಕಂಚು
- ಮಹಿಳೆಯರ 200 ಮೀ ಟಿ12 (ಅಥ್ಲೆಟಿಕ್ಸ್) ಸಿಮ್ರಾನ್ ಸಿಂಗ್ – ಕಂಚು
- ಪುರುಷರ ಜಾವೆಲಿನ್ F41 (ಅಥ್ಲೆಟಿಕ್ಸ್) ನಲ್ಲಿ ನವದೀಪ್ ಸಿಂಗ್ – ಚಿನ್ನ
- Advertisement -