Tuesday, July 1, 2025
spot_imgspot_img
spot_imgspot_img

ಭಾರತದಲ್ಲಿ 4.14 ಲಕ್ಷ ಹೊಸ ಕೇಸ್ ಪತ್ತೆ!

- Advertisement -
- Advertisement -

ನವದೆಹಲಿ: ಭಾರತದಲ್ಲಿ 24 ಗಂಟೆಗಳಲ್ಲಿ 4,14,188 ಹೊಸ ಪ್ರಕರಣ ದಾಖಲು, 3,915 ಮಂದಿ ಕೋವಿಡ್‌ನಿಂದ ಸಾವು, ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 2,34,083ಕ್ಕೆ ಏರಿದ್ದು, ಸಾವಿನ ಪ್ರಮಾಣ ಶೇ. 1.09 ರಷ್ಟಾಗಿದೆ.

ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 36,45,164 ಕ್ಕೆ ಹೆಚ್ಚಳವಾಗಿದೆ. ಒಟ್ಟು ಸೋಂಕಿತರ ಪೈಕಿ ಶೇ. 16.92 ರಷ್ಟು ಸಕ್ರಿಯ ಪ್ರಕರಣಗಳಿವೆ. ಈವರೆಗೆ 1,76,12,351 ಮಂದಿ ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ ಸೋಂಕಿತರ ಸಂಖ್ಯೆ 2,14,91,598ಕ್ಕೆ ಏರುವ ಮೂಲಕ ವಿಶ್ವದಲ್ಲೇ ಎರಡನೇ ಅತ್ಯಧಿಕ ಕೋವಿಡ್ ಸೋಂಕಿತರನ್ನು ಹೊಂದಿರುವ ದೇಶವಾಗಿದೆ.

- Advertisement -

Related news

error: Content is protected !!