Sunday, July 19, 2026
spot_imgspot_img
spot_imgspot_img

ಪ್ರತಿ ಕುಟುಂಬವೂ ಮೂರು ಮಕ್ಕಳನ್ನ ಹೊಂದಬೇಕು: ಮೋಹನ್ ಭಾಗವತ್

- Advertisement -
- Advertisement -

ನವದೆಹಲಿ: ಭಾರತದ ಪ್ರತೀ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು, ಇದು ದೇಶಕ್ಕೂ ಒಳ್ಳೆಯದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್‌ ಹೇಳಿದರು.

ಆರ್‌ಎಸ್‌ಎಸ್‌ 100 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತದ ಪ್ರತೀ ಕುಟುಂಬವು ಮೂರು ಮಕ್ಕಳನ್ನು ಹೊಂದಬೇಕು, ಇದು ದೇಶಕ್ಕೂ ಒಳ್ಳೆಯದು. ಮೂರಕ್ಕಿಂತ ಕಡಿಮೆ ಜನನದರ ಹೊಂದಿರುವ ಸಮುದಾಯಗಳು ನಿಧಾನವಾಗಿ ನಶಿಸಿಹೋಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಎಲ್ಲಾ ದೇಶಗಳಲ್ಲೂ ಈ ಪ್ರಕ್ರಿಯೆ ಸಹಜ. ಆದ್ದರಿಂದ ಮೂರಕ್ಕಿಂತ ಹೆಚ್ಚಿನ ಜನನ ಪ್ರಮಾಣವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

- Advertisement -

Related news

error: Content is protected !!