Friday, May 3, 2024
spot_imgspot_img
spot_imgspot_img

ಯೋಧರನ್ನು ರಕ್ಷಿಸಿ, ಉಗ್ರರ ಗುಂಡೇಟಿಗೆ ಬಲಿಯಾದ ಭಾರತೀಯ ಸೇನೆಯ ‘ಕೆಂಟ್’ ಶ್ವಾನ

- Advertisement -G L Acharya panikkar
- Advertisement -

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ಎನ್‌ಕೌಂಟರ್‌ನಲ್ಲಿ ಭಾರತೀಯ ಸೇನೆಯ 6 ವರ್ಷದ ಶ್ವಾನ ‘ಕೆಂಟ್’ ಯೋಧನನ್ನು ರಕ್ಷಿಸುವ ಸಂದರ್ಭದಲ್ಲಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ.

ಲ್ಯಾಬ್ರಡಾರ್ ತಳಿಯ ಹೆಣ್ಣು ಶ್ವಾನ ಕೆಂಟ್ ಭಯೋತ್ಪಾದಕರನ್ನು ಸದೆಬಡಿಯುವ ಹಾದಿಯಲ್ಲಿ ಸೈನಿಕರ ಪಡೆಯನ್ನು ಮುನ್ನಡೆಸುತ್ತಿತ್ತು. ನಾರ್ಲಾ ಗ್ರಾಮದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಎನ್‌ಕೌಂಟರ್ ನಡೆದಿದೆ.

ಕೆಂಟ್ 21 ನೇ ಆರ್ಮಿ ಡಾಗ್ ಯುನಿಟ್‌ನ ಭಾಗವಾಗಿತ್ತು. ಭಯೋತ್ಪಾದಕರ ದಾಳಿಯಿಂದ ಯೋಧನನ್ನು ಉಳಿಸುವಾಗ ತನ್ನ ಪ್ರಾಣವನ್ನು ತ್ಯಜಿಸಿದಳು. ಉಗ್ರರು ಇಲ್ಲಿನ ಕಾಡಿನಲ್ಲಿ ಒಳನುಸುಳುತ್ತಿರುವ ಮಾಹಿತಿಯನ್ನು ಪಡೆದ ಸೇನೆ, ‘ಆಪರೇಷನ್‌ ಸುಜಲೀಗಾಲಾ’ ಮೂಲಕ ಹುಡುಕಾಟ ನಡೆಸಿತ್ತು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹಾಗೂ ಉಗ್ರ ಬಲಿಯಾಗಿದ್ದಾರೆ. ಜೊತೆಗೆ ಇಬ್ಬರು ಸೇನೆ ಜವಾನ್‌ ಹಾಗೂ ಓರ್ವ ಅಧಿಕಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಿಕ್ಕ ಓರ್ವ ಉಗ್ರ ಪರಾರಿಯಾಗಿದ್ದಾನೆ. ಉಗ್ರರಿಂದ ಬಟ್ಟೆ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೇನೆ ತಿಳಿಸಿದೆ.

- Advertisement -

Related news

error: Content is protected !!