- Advertisement -
- Advertisement -
ನವದೆಹಲಿ: ಮಾಹಿತಿ ಸೋರಿಕ ತಡೆಗಟ್ಟುವ ಹಿನ್ನಲೆಯಲ್ಲಿ ಸೈನಿಕರಿಗೆ ಫೇಸ್ ಬುಕ್, ಇನ್ ಸ್ಟಾ ಗ್ರಾಂ ಸೇರಿದಂತೆ 89 ಆ್ಯಪ್ ಗಳನ್ನು ಬಳಸದಂತೆ ಭಾರತೀಯ ಸೇನೆ ಸೂಚನೆ ನೀಡಿದೆ. ದೇಶದ ಕೆಲವೊಂದು ಅಮೂಲ್ಯ ಮಾಹಿತಿ ಸೋರಿಕೆಯಾಗುತ್ತಿದೆ. ಹೀಗಾಗಿ ಫೇಸ್ ಬುಕ್, ಇನ್ ಸ್ಟಾ ಗ್ರಾಂ, ಪಬ್ ಜಿ ಸೇರಿದಂತೆ 89 ಆ್ಯಪ್ ಗಳನ್ನು ಫೋನ್ ಗಳಿಂದ ಡಿಲೀಟ್ ಮಾಡುವಂತೆ ಸೇನಾ ಸಿಬ್ಬಂದಿಗೆ ಮನವಿ ಮಾಡಲಾಗಿದೆ.
ಈ 89 ಆ್ಯಪ್ ಗಳಲ್ಲಿ ಚೀನಾದ 59 ಆ್ಯಪ್ ಗಳೂ ಸೇರಿವೆ. ಹೀಗಾಗಿ ಡಿಲೀಟ್ ಲಿಸ್ಟ್ ನಲ್ಲಿ ಈ ಎಲ್ಲ ಆ್ಯಪ್ ಗಳನ್ನು ಭಾರತೀಯ ಸೇನೆ ಸೇರಿಸಿದೆ. ಮಾಹಿತಿ ಸೋರಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಸೇನೆ ಈ ನಿರ್ಧಾರ ತೆಗೆದುಕೊಂಡಿದೆ.
ಸೋಷಿಯಲ್ ಮೀಡಿಯಾ ಬಳಸಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಭಾರತದ ಯೋಧರನ್ನು ಹನಿಟ್ರ್ಯಾಪ್ ಗೆ ಕೆಡವಿ ಅಮೂಲ್ಯ ಮಾಹಿತಿಯನ್ನು ಕಸಿದುಕೊಂಡಿತ್ತು. ಹೀಗಾಗಿ ಸೇನಾಪಡೆ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮಾಹಿತಿ ಲಭಿಸಿದೆ.
- Advertisement -