Monday, July 20, 2026
spot_imgspot_img
spot_imgspot_img

ನ್ಯೂಯಾರ್ಕ್ ನಲ್ಲಿ ಗುಂಡಿನ ದಾಳಿ; ಭಾರತೀಯ ಮೂಲದ ವಿದ್ಯಾರ್ಥಿನಿ ಮೃತ್ಯು

- Advertisement -
- Advertisement -

ನ್ಯೂಯಾರ್ಕ್: ದುಷ್ಕರ್ಮಿಯೊಬ್ಬ ಅಮಾಯಕರ ಮೇಲೆ ಮನಬಂದಂತೆ ಗುಂಡು ಹಾರಿಸಿ ಇಬ್ಬರು ವಿದ್ಯಾರ್ಥಿಗಳನ್ನು ಹತ್ಯೆ ಮಾಡಿರುವ ಘಟನೆ ಅಮೆರಿಕದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದಲ್ಲಿ ನಡೆದಿದೆ. ಮೃತಪಟ್ಟವರ ಪೈಕಿ ಓರ್ವ ವಿದ್ಯಾರ್ಥಿನಿ ಭಾರತೀಯ ಮೂಲದ ಸವಿತಾ ಶಾನ್(21) ಎಂದು ಗುರುತಿಸಲಾಗಿದೆ.

ಭಾನುವಾರ(ಮಾ.1) ಮುಂಜಾನೆ ಸುಮಾರು 2 ಗಂಟೆಯ ಸುಮಾರಿಗೆ ಆಸ್ಮಿನ್ ನಗರದ ಜನನಿಬಿಡ ಮನೋರಂಜನಾ ವಲಯವಾದ ವೆಸ್ಟ್ ಸಿಕ್ಸ್, ಸ್ಟ್ರೀಟ್‌ನಲ್ಲಿರುವ ಬಫರ್ಡ್ಸ್ ಬ್ಯಾಕ್‌ಯಾರ್ಡ್ ಬಿಯರ್ ಗಾರ್ಡನ್ ಎಂಬ ಬಾರ್‌ನ ಹೊರಗೆ ದಾಳಿ ನಡೆದಿದ್ದು, ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಮ್ಯಾನೇಜ್‌ಮೆಂಟ್ ವಿಷಯಗಳಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದ ಸವಿತಾ ಅವರು ಈ ದಾಳಿಗೆ ಬಲಿಯಾಗಿದ್ದಾರೆ.

ಆರೋಪಿ ಡಯಾಗ್ನೆ ತನ್ನ ಕಾರನ್ನು ಬಿಯರ್ ಗಾರ್ಡನ್‌ ಹೊರ ಭಾಗದಲ್ಲಿ ನಿಲ್ಲಿಸಿ, ಜನರ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿದ್ದ. ನಂತರ ಕಾರಿನಿಂದಿಳಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜನರ ಮೇಲೆ ಮನಬಂದಂತೆ ರೈಫಲ್‌ ನಿಂದ ಗುಂಡು ಹಾರಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ.

ದಾಳಿಕೋರನನ್ನು ಸೆನೆಗಲ್ ಮೂಲದ ಎನ್‌ಡಿಯಾಗಾ ಡಿಯಾಗೋ(53) ಎಂದು ಗುರುತಿಸಲಾಗಿದ್ದು, ಆತನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎನ್ನಲಾಗಿದೆ.

ಸವಿತಾ ಅವರು ಆಸ್ಟಿನ್ ತಮಿಳು ಸಂಘದಲ್ಲಿ ಸ್ವಯಂಸೇವಕರಾಗಿ ಸಕ್ರಿಯರಾಗಿದ್ದರು ಮತ್ತು ಉತ್ತಮ ವಿದ್ಯಾರ್ಥಿಯಾಗಿದ್ದರು ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!