Thursday, April 25, 2024
spot_imgspot_img
spot_imgspot_img

ಸಕಲ ಸೇವೆಗೆ ಸಿದ್ಧವಾದ ‘ಅಂಚೆ ಕಛೇರಿ’

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯದ 800ಕ್ಕೂ ಹೆಚ್ಚು ಅಂಚೆ ಕಚೇರಿಗಳಲ್ಲಿ ಇನ್ನು ಮುಂದೆ ನಾಗರಿಕರು ವಿದ್ಯುತ್, ಗ್ಯಾಸ್ ಮತ್ತು ನೀರಿನ ಬಿಲ್ ಪಾವತಿಸಬಹುದು, ಜೀವ ವಿಮೆ, ಸಾಮಾನ್ಯ ವಿಮೆ ಪಾಲಿಸಿಗಳು, ಇಎಂಐಗಳನ್ನು ಸಹ ಪಾವತಿಸಬಹುದು ಹಾಗೂ ಸಾಲಗಳಿಗೆ ಆನ್ ಲೈನ್ ಅರ್ಜಿಯನ್ನು ಸಹ ಅಂಚೆ ಕಚೇರಿ ಮೂಲಕ ಭರ್ತಿ ಮಾಡಬಹುದು.

3 ತಿಂಗಳ ಪ್ರಾಯೋಗಿಕ ಸೇವೆ ನಂತರ ಅಂಚೆ ಇಲಾಖೆ, ನಮ್ಮ ರಾಜ್ಯದ 851 ಸೇರಿದಂತೆ ದೇಶಾದ್ಯಂತ 10 ಸಾವಿರಕ್ಕೂ ಅಧಿಕ ಅಂಚೆ ಕಚೇರಿಗಳಲ್ಲಿ ಜನ ಸೇವ ಕೇಂದ್ರಗಳನ್ನು ಆರಂಭಿಸಿದೆ. ಸಾಮಾನ್ಯ ಸೇವೆಗಳ ಕೇಂದ್ರದ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಭಾರತೀಯ ಅಂಚೆ ಇಲಾಖೆ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯದ ವಿಶೇಷ ಸೇವಾ ವಾಹನವನ್ನು ಕೇಂದ್ರಗಳಲ್ಲಿ ಸ್ಥಾಪಿಸಿದೆ.

ಅವುಗಳಲ್ಲಿ 345 ಕೇಂದ್ರಗಳು ಉತ್ತರ ಕರ್ನಾಟಕದಲ್ಲಿ, 386 ಕೇಂದ್ರಗಳು ದಕ್ಷಿಣ ಕರ್ನಾಟಕದಲ್ಲಿ ಹಾಗೂ 120 ಕೇಂದ್ರಗಳು ಬೆಂಗಳೂರು ವಲಯಗಳಲ್ಲಿವೆ. ಸರ್ಕಾರದಿಂದ ನಾಗರಿಕ ಸೇವೆಗಳು(G2C)ಸಹ ಅಂಚೆ ಕಚೇರಿಗಳಲ್ಲಿ ಜನರಿಗೆ ಒದಗಿಸಲಾಗುತ್ತಿದ್ದು, ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ, ರಾಷ್ಟ್ರೀಯ ಪಿಂಚಣಿ ಯೋಜನೆ, ಪ್ಯಾನ್ ಕಾರ್ಡು, ಇ-ಸ್ಟಾಂಪ್ ಸೇವೆಗಳು ಮತ್ತು ಜೀವನ್ ಪ್ರಮಾಣ್ ಪತ್ರ(ಡಿಜಿಟಲ್ ಲೈಫ್ ಸರ್ಟಿಫಿಕೇಟ್)ಗಳು ಆಪ್ ಮೂಲಕ ಸಿಗುವಂತೆ ಮಾಡಲಾಗುತ್ತದೆ.

- Advertisement -

Related news

error: Content is protected !!