Sunday, June 29, 2025
spot_imgspot_img
spot_imgspot_img

ಸಾಮಾಜಿಕ ಜಾಲತಾಣ ದಲ್ಲಿ ಪರಿಚಯ ಮಾಡಿಕೊಂಡು ಬಾಲಕಿಯನ್ನು ಅಪಹರಿಸಿ ಅತ್ಯಾಚಾರ

- Advertisement -
- Advertisement -

ಹೈದರಾಬಾದ್: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಪರಿಚಯ ಮಾಡಿಕೊಂಡಿದ್ದ ಬಾಲಕಿಯೊಬ್ಬಳನ್ನು ಅಪಹರಿಸಿದ ದುರುಳ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಹೈದರಾಬಾದ್’ನಲ್ಲಿ ಈ ಘಟನೆ ನಡೆದಿದೆ.

ಆರೋಪಿ ಐಟಿಐ ತರಬೇತಿ ಪಡೆದಿದ್ದು, ನಿರುದ್ಯೋಗಿಯಾಗಿದ್ದಾನೆ. ಬಾಲಕಿಯೊಬ್ಬಳನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡಿದ್ದ ಆರೋಪಿ ಬಳಿಕ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ಬಾಲಕಿ ಆತನ ಜತೆ ಸಂಪರ್ಕ ಕಡಿದುಕೊಂಡಿದ್ದಳು.

ಇದರಿಂದ ಆಕ್ರೋಶಗೊಂಡ ಆರೋಪಿ, ದೂರವಾಣಿ ಕರೆಮಾಡಿ ಬಾಲಕಿಯ ಪೋಷಕರನ್ನು ಹತ್ಯೆ ಮಾಡುವ ಬೆದರಿಕೆ ಒಡ್ಡಿದ್ದ. ಇದರಿಂದ ಭಯಗೊಂಡ ಬಾಲಕಿ ಆರೋಪಿಯ ಭೇಟಿಗೆ ಒಪ್ಪಿದ್ದಳು.

ಆರೋಪಿ ಭೇಟಿಗೆ ತೆರಳಿದ್ದ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಯುವಕ ಸಿದ್ದಿಪೇಟ್ ಜಿಲ್ಲೆಯ ಚೆರಿಯಾಲ್ ಮಂಡಲ್ ನಿವಾಸಿಯಾಗಿದ್ದಾನೆ.

- Advertisement -

Related news

error: Content is protected !!