Saturday, May 4, 2024
spot_imgspot_img
spot_imgspot_img

ಮುಂಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ ಪಡೆದುಕೊಂಡ ವಿಟ್ಲ All India Shito-ryo Karate-do union ತಂಡದ ವಿದ್ಯಾರ್ಥಿಗಳು

- Advertisement -G L Acharya panikkar
- Advertisement -

ಮುಂಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಟ್ಲ All India Shito-ryo Karate-do union ತಂಡದ ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಶೋಟೊಕನ್ ಕರಾಟೆ-ಡೊ ಫೆಡರೆಷನ್ ಇದರ ಆಶ್ರಯದಲ್ಲಿ ಮರಾಠ ಮಂಡಲ್ ಹಾಲ್ ಮುಲುಂದ್ ಮುಂಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ Independence Cup Karate championship ನಲ್ಲಿ All India Shito-ryu Karate-do union ತಂಡದ ಕರಾಟೆ ವಿದ್ಯಾರ್ಥಿಗಳು ಭಾಗವಹಿಸಿದ್ದು 12 ಪ್ರಥಮ ಸ್ಥಾನ, 7 ದ್ವಿತೀಯ, 8 ತೃತೀಯ ಸ್ಥಾನಗಳಿಸಿದ್ದಾರೆ ಹಾಗೂ ಉತ್ತಮ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ವಿಠಲ ಪದವಿ ಪೂರ್ವ ಕಾಲೇಜಿನ ಭವಿಷ್ ಕಟಾ-1st ಕುಮಿಟೆ-1st,
ಜನಪ್ರಿಯ ಸೆಂಟ್ರಲ್ ಸ್ಕೂಲ್ ಕಂಬಳಬೆಟ್ಟಿನ ಮಹಮ್ಮದ್ ಮನಾಫ್ ಕಟಾ-1st ಕುಮಿಟೆ-1st & ಮಹಮ್ಮದ್ ರಾಯಿಫ್ ಕಟಾ-3rd ಕುಮಿಟೆ-2nd,
ಮೌಂಟ್ ಕಾರ್ಮೆಲ್ ಶಾಲೆಯ ಆರೋನ್ ಕೆಲ್ವಿನ್ ಡಿಸೋಜ ಕಟಾ-1st ಕುಮಿಟೆ-2nd,
ವಿಠಲ್ ಜೇಸಿಸ್ ಶಾಲೆಯ ಸಿ ಪ್ರಥಮ್ ಕಾಮತ್ ಕಟಾ-1st, ಕುಮಿಟೆ-1st, ಷಣ್ಮುಖ ಭಟ್ ಕಟಾ-3rd, ಧ್ರುವ ಕಟಾ-2nd, ಕುಮಿಟೆ-3rd, ಸಾನ್ವಿ ಕಟಾ-1st, ಕುಮಿಟೆ-2nd,
ಸರಕಾರಿ ಶಾಲೆ ವಿದ್ಯಾಗಿರಿ ಪಡಿಬಾಗಿಲು ಶಾಲೆಯ ಹಿತಾಶ್ರೀ ಕಟಾ-3rd, ಕುಮಿಟೆ-1st,
ನಿತ್ಯಾದರ ಆಂಗ್ಲ ಮಾಧ್ಯಮ ಶಾಲೆಯ ರೆನಿಶಾ ಡಿಸೋಜ ಕಟಾ-3rd, ಕುಮಿಟೆ-3rd,
ಸಂತ ರೀಟಾ ಶಾಲೆಯ ಮೋಹಕ್ ಡಿ ಆರ್ ಕಟಾ-2nd,
ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ರಿಶೋನ್ ಲಸ್ರಾದೊ ಕಟಾ-1st, ಕುಮುಟೆ-1st, ರಿಯೋನ್ ಲಸ್ರಾದೊ ಕಟಾ-2nd,
ಸಂತ ಅಲೋಶಿಯಸ್‌ನ ಮಹಮ್ಮದ್ ಇಬ್ರಾಹಿಂ ಝಿಶಾನ್ ಕಟಾ-3, ಕುಮಿಟೆ-2nd ಮತ್ತು ಪ್ರತೀಕ್ ಶೆಟ್ಟಿ ಕಟಾ-3rd, ಕುಮಿಟೆ-1st.

ವಿದ್ಯಾರ್ಥಿಗಳು ಸೆನ್ಸಾಯಿ ಮಾಧವ ಅಳಿಕೆ ಮತ್ತು ಸೆನ್ಸಾಯಿ ವಿಕ್ಟರ್ ಡಿಸೋಜ ಇವರಿಂದ ತರಬೇತಿ ಪಡೆದಿರುತ್ತಾರೆ. ಮತ್ತು ದಿಲೀಪ್, ರೋಹಿತ್ S N, ನಿವೇದಿತಾ, ನಿಖಿಲ್ K T ಇವರು ಸಹ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದರು.

- Advertisement -

Related news

error: Content is protected !!