- Advertisement -
- Advertisement -






ವಿಟ್ಲ: ವಿಟ್ಲಮುಡ್ನೂರು ಗ್ರಾಮದ ಧರ್ಮನಗರ-ಕಂಬಳಬೆಟ್ಟು ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನದ ಸಾನಿಧ್ಯವೃದ್ಧಿ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವದ ಪ್ರಯುಕ್ತ ವಿಟ್ಲ ಪೇಟೆಯಲ್ಲಿ ಸಾರ್ವಜನಿಕರಿಗೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಲಾಯಿತು.
ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನದ ಸಾನಿಧ್ಯವೃದ್ಧಿ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವದ ಡಿ.21ರಿಂದ 25ರ ವರೆಗೆ ವಿವಿಧ ಧಾರ್ಮಿಕ , ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಇದರ ಪ್ರಯುಕ್ತ ವಿಟ್ಲದ ಜೈನ ಬಸದಿಯಿಂದ ವಿವಿಧ ಸಮಿತಿಯ ಪದಾಧಿಕಾರಿಗಳು ಮೆರವಣಿಗೆ ಮೂಲಕ ವಿಟ್ಲ ಪೇಟೆ, ಶಾಲಾ ರಸ್ತೆ, ಮಂಗಳೂರು ರಸ್ತೆ, ಕಾಸರಗೋಡು ರಸ್ತೆ ಮೂಲಕ ತೆರಳಿ ಸಾರ್ವಜನಿಕರಿಗೆ ಆಮಂತ್ರಣ ಪತ್ರಿಕೆ ಹಂಚಲಾಯಿತು.
ಈ ಸಂದರ್ಭ ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.


- Advertisement -