
ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 47ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಪ್ಲೇ ಆಫ್ ಪ್ರವೇಶದ ಕನಸು ಜೀವಂತವಾಗಿರಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ರುತುರಾಜ್ ಗಾಯಕ್ವಾಡ್ ಭರ್ಜರಿ ಶತಕದ ನೆರವಿನಿಂದ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿದೆ. ಈ ಟಾರ್ಗೆಟ್ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ 3 ವಿಕೆಟ್ ನಷ್ಟಕ್ಕೆ 17.3 ಓವರ್ನಲ್ಲಿ 190 ರನ್ ಗಳಿಸಿ ರೋಚಕ ಜಯ ಗಳಿಸಿದೆ.

ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 101, ಫಾಫ್ ಡು ಪ್ಲೆಸಿಸ್ 25, ಮೊಯೀನ್ ಅಲಿ 21, ಸುರೇಶ್ ರೈನಾ 3, ಔಟಾಗದೆ ರವೀಂದ್ರ ಜಡೇಜಾ 32 ರನ್ ಗಳಿಸಿದ್ದರು.

ರಾಜಸ್ಥಾನ ರಾಯಲ್ಸ್ ಪರ ಎವಿನ್ ಲೂಯಿಸ್ 27, ಯಶಸ್ವಿ ಜೈಸ್ವಾಲ್ 50, ಸಂಜು ಸ್ಯಾಮ್ಸನ್ 28, ಔಟಾಗದೆ ಶಿವಂ ದುಬೆ 64 ಮತ್ತು ಗ್ಲೆನ್ ಫಿಲಿಪ್ಸ್ 14 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

