Saturday, June 28, 2025
spot_imgspot_img
spot_imgspot_img

IPL 2024 : ದಶಕಗಳ ಬಳಿಕ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡ ಕೆಕೆಆರ್‌!

- Advertisement -
- Advertisement -

ಚೆನ್ನೈನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ಹೀನಾಯ ಸೋಲನ್ನು ಎದುರಿಸಿದೆ. ಹೀಗಾಗಿ ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶವನ್ನು ಹೈದರಾಬಾದ್‌ ಕಳೆದುಕೊಂಡಿದೆ. ಇತ್ತ 8 ವಿಕೆಟ್​ಗಳ ಜಯ ಸಾಧಿಸಿದ ಕೆಕೆಆರ್​ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.

2012 ಮತ್ತು 2014ರಲ್ಲಿ ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ ಚಾಂಪಿಯನ್‌ ಪಟ್ಟ ಮುಡಿಗೇರಿಸಿಕೊಂಡಿದ್ದ ಕೋಲ್ಕತ್ತಾ ನೈಟ್‌ರೈಡರ್ಸ್‌ ತಂಡ 10 ವರ್ಷಗಳ ಬಳಿಕ ಶ್ರೇಯಸ್‌ ಅಯ್ಯರ್‌ ಅವರ ನಾಯಕತ್ವದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಅಲ್ಲದೇ ಹಿಂದೆ ತಂಡದ ನಾಯಕನಾಗಿ ಟ್ರೋಫಿ ಗೆದ್ದುಕೊಟ್ಟಿದ್ದ ಗೌತಮ್‌ ಗಂಭೀರ್‌ ಈ ಬಾರಿ ತಂಡದ ಕೋಚ್‌ ಆಗಿ ಟ್ರೋಫಿ ತಂದುಕೊಟ್ಟಿರುವುದು ವಿಶೇಷ.

ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಸನ್‌ ರೈಸರ್ಸ್‌ ಹೈದರಾಬಾದ್‌ 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಸರ್ವಪತನ ಕಂಡಿತ್ತು. ಅಲ್ಪ ಮೊತ್ತ ಗುರಿ ಪಡೆದ ಕೆಕೆಆರ್‌ ಕೇವಲ 10.3 ಓವರ್‌ಗಳಲ್ಲೇ 114 ರನ್‌ ಗಳಿಸಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಕಳಪೆ ಆರಂಭ ಪಡೆದ ತಂಡ 18.3 ಓವರ್ ಗಳಲ್ಲಿ 113 ರನ್ ಗಳಿಗೆ ಪತನಗೊಂಡಿತು. ಈ ಪಂದ್ಯದಲ್ಲಿ ಕೆಕೆಆರ್ ತಂಡದ ಬೌಲರ್‌ಗಳು ಸಂಪೂರ್ಣ ಪ್ರಾಬಲ್ಯ ಮೆರೆದಿದ್ದಾರೆ. ಹೈದರಾಬಾದ್ ಪರ ಅಭಿಷೇಕ್ ಶರ್ಮಾ2 ರನ್, ಟ್ರಾವಿಸ್ ಹೆಡ್ ಶೂನ್ಯ, ರಾಹುಲ್ ತ್ರಿಪಾಠಿ 9 ರನ್, ಅಡೇನ್ ಮಾರ್ಕರಮ್ 20 ರನ್, ನಿತೀಶ್ ಕುಮಾರ್ ರೆಡ್ಡಿ 13 ರನ್, ಹೆನ್ರಿಚ್ ಕ್ಲಾಸಿನ್ 16 ರನ್, ಶಾಬಾಝ್ ಅಹ್ಮದ್ 8 ರನ್, ಅಬ್ದುಲ್ ಸಮೀದ್ 4 ರನ್, ನಾಯಕ ಪ್ಯಾಟ್ ಕಮಿನ್ಸ್ 24 ರನ್ ಗಳಿಸುವ ಮೂಲಕ ಹೈದರಾಬಾದ್ ಅಲ್ಪಮೊತ್ತಕ್ಕೆ ಕುಸಿಯಿತು.

ಕೆಕೆಆರ್ ಭರ್ಜರಿ ಬೌಲಿಂಗ್:ಇನ್ನು, ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಆರಂಭದಿಂದಲೇ ಹೈದರಾಬಾದ್ ಮೇಲೆ ಸವಾರಿ ಮಾಡಿತು. ಕೋಲ್ಕತ್ತಾ ಆರಂಭದಲ್ಲಿಯೇ SRH ತಂಡದ ಬ್ಯಾಟಿಂಗ್ ಬೆನ್ನೆಲುಭಾಗಿದ್ದ ಹೆಡ್ ಮತ್ತು ಅಭಿಷೇಕ್ ಇಬ್ಬರ ವಿಕೆಟ್ ಪಡೆದು ಬ್ರೇಕ್ ಥ್ಯ ನೀಡಿತು. ಕೆಕೆಆರ್ ಪರ ಮಿಚೆಲ್ ಸ್ಟಾರ್ಕ್ 3 ಓವರ್‌ಗೆ 14 ರನ್ ನೀಡಿ 2 ವಿಕೆಟ್ ಪಡೆದರೆ, ಆಯಂಡೋ ರೆಸೆಲ್ 2.3 ಓವರ್‌ಗೆ 19 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಉಳಿಂದತೆ ವೈಭವ್ ಅರೋರಾ 3 ಓವರ್‌ಗೆ 24 ರನ್ನೆ 1 ವಿಕೆಟ್, ಹರ್ಷಿತ್ ರಾಣಾ 2 ವಿಕೆಟ್, ಸುನೀಲ್ ನರೇನ್ 1 ವಿಕೆಟ್ ಹಾಗೂ ವರೂಣ್ ಚರ್ಕವರ್ತಿ 1 ವಿಕೆಟ್ ಪಡೆದು ಮಿಂಚಿದರು.

- Advertisement -

Related news

error: Content is protected !!