Saturday, June 28, 2025
spot_imgspot_img
spot_imgspot_img

ಐಪಿಎಲ್ ಬೆಟ್ಟಿಂಗ್ ಜಾಲ-ಮೂವತ್ತು ಲಕ್ಷ ರೂಪಾಯಿ ವಶ

- Advertisement -
- Advertisement -

ಬೆಂಗಳೂರು ಅ.(21): ಬೃಹತ್ ಆನ್ ಲೈನ್ ಆಪ್ ಕ್ರಿಕೆಟ್ ಬೆಟ್ಟಿಂಗ್ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಎಸಿಪಿ ಹನುಮಂತರಾಯ ಅವರ ನೇತೃತ್ವದ ತಂಡ ಈ ದಾಳಿ ನಡೆಸಿದೆ. ಮೂವತ್ತು ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ ಐಪಿಎಲ್ ಬೆಟ್ಟಿಂಗ್ ಜಾಲ ವ್ಯಾಪಕವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹಿನ್ನೆಲೆಯಲ್ಲಿ ಪೊಲೀಸರು ದಾಳಿ ತೀವ್ರಗೊಳಿಸಿದ್ದಾರೆ. ಮಂಗಳೂರು ಮತ್ತು ಹುಬ್ಬಳಿಯಲ್ಲಿ ಕೂಡ ಬೆಟ್ಟಿಂಗ್ ಜಾಲ ಸಕ್ರಿಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ.ಆನ್ ಲೈನ್ ಆಪ್ ಮೂಲಕ ಈ ಬೆಟ್ಟಿಂಗ್ ನಡೆಯುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

- Advertisement -

Related news

error: Content is protected !!