Wednesday, July 22, 2026
spot_imgspot_img
spot_imgspot_img

*ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಗೆ 15 ರನ್ ಜಯ.*

- Advertisement -
- Advertisement -

ĺಅಬುದಾಭಿ: ಸನ್ ರೈಸರ್ಸ್ ಹೈದ್ರಾಬಾದ್ ನೀಡಿದ 163 ರನ್ ಸವಾಲನ್ನು ಬೆನ್ನಟ್ಟುವಲ್ಲಿ ವಿಫಲವಾದ ಡೆಲ್ಲಿ ಕ್ಯಾಪಿಟಲ್ಸ್ 15 ರನ್ ಗಳ ಸೋಲನ್ನು ಕಂಡಿದೆ. 162 ರನ್ ಗುರಿಯನ್ನು ಚೇಸ್ ಮಾಡಲಾರಂಭಿಸಿದ ಡೆಲ್ಲಿಗೆ ಪೃಥ್ವಿ ಶಾ ವಿಕೆಟ್ 2 ರನ್ ಆಗುವಷ್ಟರಲ್ಲಿ ಉರುಳುವುದರೊಂದಿಗೆ ಆಘಾತ ಪ್ರಾರಂಭವಾಯಿತು.

ಧವನ್, ಪಂತ್, ಅಯ್ಯರ್, ಹೈಟ್ಮೇರ್  ರಂತಹ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಗಳನ್ನು ಹೊಂದಿದ್ದರೂ ಡೆಲ್ಲಿ ಪಡೆಯಿತು.  ಹೈದ್ರಾಬಾದ್ ತಂಡದ ಶಿಸ್ತುಬದ್ಧ ಬೌಲಿಂಗ್ ಮತ್ತು ಉತ್ತಮ ಫೀಲ್ಡಿಂಗ್ ಗೆ ಬೆದರಿ 20 ಓವರ್ ಗಳಲ್ಲಿ 7 ವಿಕೆಟ್ ಗಳನ್ನು ಕಳೆದುಕೊಂಡು 147 ರನ್ ಗಳಷ್ಟನ್ನೇ ಕಲೆ ಹಾಕಲು ಶಕ್ತವಾಯಿತು.

ಆದರೆ ಡೆಲ್ಲಿ ತಂಡದ ಯಾವೊಬ್ಬ ಬ್ಯಾಟ್ಸ್ ಮನ್ ಸಹ ಪಂದ್ಯದ ಯಾವುದೇ ಹಂತದಲ್ಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಲು ಸಾಧ್ಯವಾಗಲೇ ಇಲ್ಲ. ಇದಕ್ಕೆ ಹೈದ್ರಾಬಾದ್ ತಂಡದ ಶಿಸ್ತಿನ ಬೌಲಿಂಗ್ ಅವಕಾಶ ನೀಡಲಿಲ್ಲ. ಹಾಗಾಗಿ ಈ ಸಾಮಾನ್ಯ ಗುರಿಯನ್ನೂ ಸಹ ಚೇಸ್ ಮಾಡಲು ಸಾಧ್ಯವಾಗಲಿಲ್ಲ.

- Advertisement -

Related news

error: Content is protected !!