Tuesday, July 1, 2025
spot_imgspot_img
spot_imgspot_img

ಐಪಿಯಲ್ ಹಬ್ಬ 2021: ಆರ್ ಸಿ ಬಿ ತಂಡ ಸೇರಲು ಚೆನ್ನೈಗೆ ಬಂದ ವಿರಾಟ್ ಕೊಹ್ಲಿ

- Advertisement -
- Advertisement -

ಚೆನ್ನೈ: ಟೀಂ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ತನ್ನ ಐಪಿಎಲ್ ತಂಡವನ್ನು ಸೇರಲು ಗುರುವಾರ ಚೆನ್ನೈಗೆ ಆಗಮಿಸಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಏಳು ದಿನ ಕ್ವಾರಂಟೈನ್ ನಲ್ಲಿ ಅವರು ಇರಬೇಕಾಗುತ್ತದೆ.

ಏಪ್ರಿಲ್ 9ರಿಂದ ಆರಂಭವಾಗಲಿರುವ ಮುಂಬರುವ ಆವೃತ್ತಿಗಾಗಿ ಮಂಗಳವಾರ ತಂಡ ಈಗಾಗಲೇ ತರಬೇತಿ ಕ್ಯಾಂಪ್ ನ್ನು ಆರಂಭಿಸಿದೆ. ವಿರಾಟ್ ಕೊಹ್ಲಿ ಮಾಸ್ಕ್ ಧರಿಸಿ ಚೆನ್ನೈಗೆ ಆಗಮಿಸಿರುವುದನ್ನು ಫೋಟೋದೊಂದಿಗೆ ಆರ್ ಸಿಬಿ ಟ್ವೀಟ್ ಮಾಡಿದೆ.

ಏಪ್ರಿಲ್ 9 ರಂದು ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಆರ್ ಸಿ ಬಿ ಸೆಣೆಸಾಡಲಿದೆ. ಐಪಿಎಲ್ ಆರಂಭವಾದಾಗಿನಿಂದಲೂ ಆರ್ ಸಿಬಿ ತಂಡದಲ್ಲಿರುವ ಕೊಹ್ಲಿ, ಇಂಗ್ಲೆಂಡ್ ವಿರುದ್ಧ ಭಾರತ ಏಕದಿನ ಸರಣಿ ಗೆದ್ದ ನಂತರ ಸೋಮವಾರ ಪುಣೆಯ ಜೈವಿಕ ಗುಳ್ಳೆಯನ್ನು ತೋರೆದಿದ್ದರು.

ಇಂಗ್ಲೆಂಡ್ ವಿರುದ್ಧದ ಸರಣಿ ಹಿನ್ನೆಲೆಯಲ್ಲಿ ಜನವರಿ ಮಾಸಾಂತ್ಯದಿಂದಲೂ ಕೊಹ್ಲಿ ಜೈವಿಕ ಸುರಕ್ಷಿತ ವಲಯದಲ್ಲಿದ್ದರು. ಮತ್ತೊಬ್ಬ ಪ್ರಮುಖ ಆಟಗಾರ ಎಬಿ ಡಿವಿಲಿಯರ್ಸ್ ಗುರುವಾರ ಆರ್ ಸಿಬಿ ಜೈವಿಕ ಗುಳ್ಳೆಯನ್ನು ಸೇರಿದ್ದಾರೆ. 37 ವರ್ಷದ ಕೊಹ್ಲಿ, ಆರ್ ಸಿಬಿಯ ಪ್ರಮುಖ ಬ್ಯಾಟಿಂಗ್ ಆಟಗಾರರಾಗಿದ್ದಾರೆ.

- Advertisement -

Related news

error: Content is protected !!