Monday, June 30, 2025
spot_imgspot_img
spot_imgspot_img

ಕೇರಳದಲ್ಲಿ ಇಸ್ರೇಲ್ ಮಹಿಳೆ ಸಾವು..!

- Advertisement -
- Advertisement -

ಲಿವ್ ಇನ್ ರಿಲೇಷನ್‌ಶಿಪ್ ನಲ್ಲಿದ್ದ 36 ವರ್ಷದ ಇಸ್ರೇಲ್ ಮಹಿಳೆಯೊಬ್ಬರು ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ.

ಮಹಿಳೆಯ ಸಂಗಾತಿಯಾಗಿದ್ದ ಯೋಗ ಶಿಕ್ಷಕನಾಗಿರುವ 70 ವರ್ಷದ ಯೋಗ ಆಚಾರ್ಯ ಎಂಬಾತನ ಮೇಲೆ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಮಹಿಳೆ ಮತ್ತು ಆರೋಪಿ ಆತ್ಮಹತ್ಯೆ ಮಾಡಲು ನಿರ್ಧರಿಸಿದ್ದು ಗುರುವಾರ ಮಧ್ಯಾಹ್ನ ಆರೋಪಿಯು ಮೊದಲು ಮಹಿಳೆಯ ಕತ್ತು ಸೀಳಿದ್ದಾನೆ. ಬಳಿಕ ತನ್ನ ಕುತ್ತಿಗೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದುಕೊಂಡಿದ್ದಾನೆ. ಮಹಿಳೆಯ ಕುತ್ತಿಗೆ ಭಾಗವನ್ನು ಹೊರತುಪಡಿಸಿ ಆಕೆಯ ದೇಹದ ಇತರೆ ಭಾಗಗಳಲ್ಲಿ ಚಾಕು ಇರಿದ ಗಾಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ಸಂಬಂಧಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ 15 ವರ್ಷಗಳಿಂದ ಉತ್ತರಾಖಂಡ್‌ನಲ್ಲಿದ್ದು, ಕಳೆದ ಒಂದು ವರ್ಷದಿಂದ ಕೇರಳದಲ್ಲಿ ವಾಸವಿದ್ದರು. ಖಿನ್ನತೆಗೆ ಒಳಗಾಗಿದ್ದ ಮಹಿಳೆ ಯೋಗ್ಯಾಭ್ಯಾಸ ನಡೆಸುತ್ತಿದ್ದರೂ ಪ್ರಯೋಜನವಾಗಿರಲಿಲ್ಲ. ಗಾಯಗೊಂಡಿರುವ ಮಹಿಳೆಯ ಸಂಗಾತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ನಿಗಾ ವಹಿಸಿದ್ದಾರೆ. ಕೊಠಡಿಯಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

Related news

error: Content is protected !!