- Advertisement -
- Advertisement -
ವಿಜಯವಾಡ(ನ.10): ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಹವಾಲ್ದಾರ್ ಪ್ರವೀಣ್ ಕುಮಾರ್ ರೆಡ್ಡಿ ಅವರ ಕುಟುಂಬಕ್ಕೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ 50 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಿನ್ನೆ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹವಾಲ್ದಾರ್ ಪ್ರವೀಣ್ ರೆಡ್ಡಿ ವೀರಮರಣ ಹೊಂದಿದ್ದರು.ಹುತಾತ್ಮ ಸೈನಿಕನ ಪತ್ನಿಗೆ ಸಂತಾಪ ಸೂಚಕ ಪತ್ರ ಕಳುಹಿಸಿರುವ ಜಗನ್, ರಾಜ್ಯ ಸರ್ಕಾರದಿಂದ 50 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ.

ಚಿತ್ತೂರು ಜಿಲ್ಲೆಯ ಇರಾಲ ಮಂಡಲದ ರೆಡ್ಡಿವಾರಿಪಲ್ಲಿಯಲ್ಲಿನ ಹುತಾತ್ಮ ಯೋಧನ ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವರಾದ ಕೆ. ನಾರಾಯಣ ಸ್ವಾಮಿ, ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ, ಸಂಸದ ರೆಡ್ಡಪ್ಪ ಮತ್ತು ಶಾಸಕ ಎಂ ಎಸ್ ಬಾಬು ಯೋಧನ ಕುಟುಂಬದವರಿಗೆ ಮುಖ್ಯಮಂತ್ರಿಯವರ ಸಂತಾಪ ಪತ್ರವನ್ನು ಹಸ್ತಾಂತರಿಸಿದರು.

- Advertisement -