
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜಗನ್ನಾಥ ಸಾಲ್ಯಾನ್ ಹಾಗೂ ಉಪಾಧ್ಯಕ್ಷರಾಗಿ ಮನೋರಂಜನ್ ಕರೈ ಆಯ್ಕೆಯಾಗಿದ್ದಾರೆ.
ಕಳೆದ ಚುನಾವಣೆಯಲ್ಲಿ ಸಹಕಾರ ಭಾರತಿಯ 15 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜೇತರಾಗಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದರು. ಇದೀಗ ಮುಂದಿನ 5 ವರ್ಷಗಳ ಅವಧಿಗೆ ಅಭ್ಯರ್ಥಿಗಳ ಚುನಾವಣೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಜಗನ್ನಾಥ ಸಾಲ್ಯಾನ್ ಹಾಗೂ ಉಪಾಧ್ಯಕ್ಷರಾಗಿ ಮನೋರಂಜನ್ ಕರೈ ಆಯ್ಕೆಯಾಗಿದ್ದಾರೆ.
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ಮುಂದಿನ 5 ವರ್ಷಗಳ ಸಾಲಿಗೆ ನೂತನ ಆಡಳಿತ ಮಂಡಲಿ ಅಧ್ಯಕ್ಷರಾಗಿ ಜಗನ್ನಾಥ ಸಾಲಿಯಾನ್ ಹೆಚ್ ಮತ್ತು ಉಪಾಧ್ಯಕ್ಷರಾಗಿ ಮನೋರಂಜನ್ ಕೆ ಆರ್ ಅವಿರೋಧವಾಗಿ ಆಯ್ಕೆಯಾದರು . ಈ ಚುನಾವಣಾ ಪ್ರಕ್ರಿಯೆಯನ್ನು ಶ್ರೀ ಶಿವಲಿಂಗಯ್ಯ ಎಂ. ರಿಟರ್ನಿಂಗ್ ಅಧಿಕಾರಿ ನಡೆಸಿಕೊಟ್ಟರು. ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಕೃಷ್ಣ ಮುರಳಿ ಶ್ಯಾಮ್ ಕೆ ಸಹಕರಿಸಿದರು.
ಆಡಳಿತ ಮಂಡಲಿ ಸದಸ್ಯರ ವಿವರ ಕೇಶವ ಎ, ಗೋವರ್ಧನ್ ಕುಮಾರ್ ಐ, ಭಾಸ್ಕರ ಶೆಟ್ಟಿ, ರಾಮದಾಸ್ ಶೆಣೈ ವಿ, ಮೋಹನ್ ಕೆ ಎಸ್, ವಿಶ್ವನಾಥ ಎಂ, ತಿರುಮಲೇಶ್ವರ ಭಟ್ ಪಿ, ಸತೀಶ್ ಪಿ. ಜಯಂತಿ ಹೆಚ್ ರಾವ್, ಶುಭಲಕ್ಷ್ಮಿ, ದಯಾನಂದ ಆಳ್ವ ಕೆ, ಪೂವಪ್ಪ ಎಸ್. ದಿವಾಕರ ವಿ.