Saturday, June 28, 2025
spot_imgspot_img
spot_imgspot_img

ಜೈಲು ಪಾಲಾದ ರೀಲ್ಸ್‌ ರಾಣಿ ಸೋನು ಗೌಡ

- Advertisement -
- Advertisement -

ಬೆಂಗಳೂರು : ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ರೀಲ್ಸ್ ಸ್ಟಾರ್ ಸೋನು ಗೌಡಳನ್ನು ಬಂಧಿಸಲಾಗಿತ್ತು, ಇದೀಗ ಸೋನುಗೌಡಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

ರಾಯಚೂರು ಮೂಲದ ಬಡ ಕುಟುಂಬಕ್ಕೆ ಸೇರಿದ ಏಳು ವರ್ಷದ ಬಾಲಕಿಯನ್ನು ಅಕ್ರಮವಾಗಿ ದತ್ತು ಪಡೆದ ಅರೋಪದಲ್ಲಿ ಬಂಧನಕ್ಕೆ ಒಳಗಾದ ಬಿಗ್ ಬಾಸ್ ಖ್ಯಾತಿಯ ರೀಲ್ಸ್ ರಾಣಿ ಸೋನು ಗೌಡಳನ್ನು ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಮೂಲಕ ತನ್ನ ವಿಭಿನ್ನ ವರ್ತನೆ ಮತ್ತು ವಿವಾದಗಳಿಂದಲೇ ಗಮನ ಸೆಳೆದ ಸುಂದರಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾಳೆ

ಚೈಲ್ಡ್ ವೇಲ್ ಫೇರ್ ಕಮಿಟಿ ಅಧಿಕಾರಿಗಳು ಬ್ಯಾಡರಹಳ್ಳಿ ದೂರು ನೀಡಿದ ದೂರಿನ ಹಿನ್ನೆಲೆ ಅಂದ್ರಹಳ್ಳಿ ನಿವಾಸದಲ್ಲಿ ಸೋನುಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. ಸೋನುಗೌಡ ಅವರು ಮಗುವನ್ನು ದತ್ತು ಪಡೆಯಲು ಅನುಸರಿಬೇಕಾದ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ರೀಲ್ಸ್ ಸ್ಮಾರ್ ಸೋನು ಶ್ರೀನಿವಾಸ್ ಗೌಡ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಸೋನು ಗೌಡರನ್ನು ಬಂಧಿಸಲಾಗಿತ್ತು. ನಂತರ ಸೋನು ಗೌಡರನ್ನು ಕೋರ್ಟ್ ಗೆ ಹಾಜರುಪಡಿಸಲಾಗಿತ್ತು ವಿಚಾರಣೆ ನಡೆಸಿದ ಕೋರ್ಟ್ ಹೆಚ್ಚಿನ ವಿಚಾರಣೆಗಾಗಿ 4 ದಿನ ಪೊಲೀಸ್ ಕಸ್ಟಡಿ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು, ಇದೀಗ ಸೋನುಗೌಡಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ. ಕೋರ್ಟ್ ಆದೇಶ ಹೊರಡಿಸಿದೆ.

- Advertisement -

Related news

error: Content is protected !!