Sunday, July 6, 2025
spot_imgspot_img
spot_imgspot_img

ಬಸ್ ಗೆ ತಾಗಿದ 11 ಸಾವಿರ ವೋಲ್ಟ್ ವಿದ್ಯುತ್ ತಂತಿ!- 6 ಮಂದಿ ಸಜೀವ ದಹನ

- Advertisement -
- Advertisement -

ಜೈಪುರ: ರಾಜಸ್ಥಾನದ ಜಲೌರ್ ನಲ್ಲಿ ಶನಿವಾರ ರಾತ್ರಿ ಭೀಕರ ಅವಘಢ ಸಂಭವಿಸಿದ್ದು, 11 ಸಾವಿರ ವೋಲ್ಟ್ ವಿದ್ಯುತ್ ತಂತಿ ತಾಗಿದ ಪರಿಣಾಮ ಬಸ್ ಸುಟ್ಟು ಭಸ್ಮವಾಗಿದೆ. ಬಸ್ ನಲ್ಲಿದ್ದ ಆರು ಜನರು ಸಜೀವ ದಹನವಾಗಿದ್ದಾರೆ. ಜಲೌನ್ ನಗರದ ಏಳು ಕಿಲೋ ಮೀಟರ್ ದೂರದಲ್ಲಿರುವ ಮಹೇಶಪುರ ಗ್ರಾಮದಲ್ಲಿ ಈ ದುರಂತ ನಡೆದಿದೆ.

ಜೈನ ಸಮುದಾಯದ 36 ಜನರು ನಾಕೋಡ ತೀರ್ಥ ಕ್ಷೇತ್ರದ ದರ್ಶನ ಪಡೆದು ಅಜ್ಮೇರ್ ನತ್ತ ಪ್ರಯಾಣ ಬೆಳೆಸಿದ್ದರು. ಗಾಯಾಳುಗಳನ್ನು ಜಲೌರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನ ಜೋಧಪುರ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಕೆಲವರ ಗುರುತು ಪತ್ತೆಯಾಗಿದ್ದು, ಹಲವರ ಗುರುತು ಪತ್ತೆಯಾಗಿಲ್ಲ.

ಶುಕ್ರವಾರ ಎರಡು ಖಾಸಗಿ ಬಸ್ ಗಳಲ್ಲಿ ಯಾತ್ರಿಗಳು ಬೀವಾರ್ ನತ್ತ ಪ್ರಯಾಣ ಬೆಳೆಸಿದ್ದರು. ಶನಿವಾರ ಜಲೌರ್ ನಲ್ಲಿರುವ ಜೈನ ಮಂದಿರದ ದರ್ಶನ ಪಡೆದು ಅಜ್ಮೇರ್ ಮಾರ್ಗವಾಗಿ ಬೀವರ್ ನತ್ತ ಹೊರಟಿದ್ದರು. ರಾತ್ರಿ ಊಟದ ಬಳಿಕ ಚಾಲಕ ಗೂಗಲ್ ಮ್ಯಾಪ್ ಬಳಸಿ ಮಹೇಶಪುರ ಗ್ರಾಮದ ಸಂಕಲಿ ಗಲ್ಲಿಗಳ ಮೂಲಕ ಹೊರಟಿದ್ದನು. ಗ್ರಾಮದಲ್ಲಿಯ ವಿದ್ಯುತ್ ತಂತಿಗೆ ಬಸ್ ಮೇಲ್ಭಾಗ ತಾಗಿದ್ದರಿಂದ ಬೆಂಕಿ ಹತ್ತಿಕೊಂಡಿದೆ.

ಚಾಲಕ ಗೂಗಲ್ ಮ್ಯಾಪ್ ಸಹಾಯದಿಂದ ಬೀವರ್ ನತ್ತ ಹೊರಟಿದ್ದನು. ಗ್ರಾಮದ ಇಕ್ಕಟ್ಟಾದ ರಸ್ತೆಯಲ್ಲಿ ಸಂಚರಿಸುತ್ತಿದ್ದರಿಂದ ಓರ್ವ ಬಸ್ ಮೇಲ್ಭಾಗದಲ್ಲಿ ಕೇಬಲ್, ವಿದ್ಯುತ್ ತಂತಿ ತಗುಲದಂತೆ ನೋಡಿಕೊಳ್ಳುತ್ತಿದ್ದನು. ಮೇಲೆ ನಿಂತಿದ್ದವನಿಗೆ ವಿದ್ಯುತ್ ಸ್ಪರ್ಶಗೊಂಡಿದ್ದರಿಂದ ಬಸ್ ಗೆ ಬೆಂಕಿ ತಗುಲಿತು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.

- Advertisement -

Related news

error: Content is protected !!