- Advertisement -
- Advertisement -
ಶ್ರೀನಗರ: ಜಮ್ಮು-ಕಾಶ್ಮೀರದ ನೂತನ ಲೆಫ್ಟಿನೆಂಟ್ ಗವರ್ನರ್ ಆಗಿ ಬಿಜೆಪಿ ಮುಖಂಡ , ಮಾಜಿ ಸಚಿವ ಮನೋಜ್ ಸಿನ್ಹಾ ನೇಮಕವಾಗಿದ್ದಾರೆ. ನಿನ್ನೆಯಷ್ಟೇ ಗವರ್ನರ್ ಎಲ್. ಜಿ ಗಿರೀಶ್ ಚಂದ್ರ ಮುರ್ಮು ರಾಜೀನಾಮೆ ನೀಡಿದ್ದರು. ಈ ತೆರವಾದ ಸ್ಥಾನಕ್ಕೆ ಮನೋಜ್ ಸಿನ್ಹಾ ನೇಮಕವಾಗಿದ್ದಾರೆ.
ಕಳೆದ ವರ್ಷ ಜಮ್ಮು-ಕಾಶ್ಮೀರದಲ್ಲಿ 370 ವಿಧಿ ರದ್ದಾದ ಬಳಿಕ ಮೊದಲ ಲೆಫ್ಟಿನೆಂಟ್ ಗರ್ವನರ್ ಆಗಿ ಎಲ್ ಜಿ ಗಿರೀಶ್ ಚಂದ್ರ ಮುರ್ಮು ನೇಮಕವಾಗಿದ್ದರು. ಇದೀಗ 370 ಆರ್ಟಿಕಲ್ ರದ್ದಾಗಿ ಒಂದು ಪೂರೈಸಿದ ನಡುವೆ ಮನೋಜ್ ಸಿನ್ಹಾ ಅವರನ್ನು ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಲಾಗಿದೆ.
61 ವರ್ಷದ ಮನೋಜ್ ಸಿನ್ಹಾ ಅವರು 3 ಬಾರಿ ಲೋಕಸಭಾ ಸದಸ್ಯರಾಗಿದ್ದರು. ಬಿಜೆಪಿ ನ್ಯಾಷನಲ್ ಕೌನ್ಸಿಲ್ ಸದಸ್ಯರಾಗಿದ್ದರು, ರಾಜ್ಯ ಸಚಿವರಾಗಿಗೂ ಕಾರ್ಯ ನಿರ್ವಹಿಸಿದ್ದರು.
- Advertisement -