Monday, June 30, 2025
spot_imgspot_img
spot_imgspot_img

ಜಮ್ಮುವಿನಲ್ಲಿ ಇಬ್ಬರು ಉಗ್ರ ಸಹಚರರ ಬಂಧನ !

- Advertisement -
- Advertisement -

ನವದೆಹಲಿ : ಪುಲ್ವಾಮ ಮಾದರಿಯಲ್ಲಿ ಜಮ್ಮುವಿನಲ್ಲಿ ಮತ್ತೊಂದು ಸ್ಫೋಟಕ್ಕೆ ತಯಾರಿ ನಡೆಸುತ್ತಿದ್ದ ಉಗ್ರ ಸೋಹೆಲ್​ನನ್ನು ಜಮ್ಮು ಪೊಲೀಸರು ಬಂಧಿಸಿದ ಬೆನ್ನಲ್ಲೆ, ಬುದ್ಗಾಂವ್​ನಲ್ಲಿ ಮತ್ತಿಬ್ಬರು ಉಗ್ರರ ಸಹಚರರನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.

ಬುದ್ಗಾಂವ್ ಪೊಲೀಸರು ಹಾಗೂ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್ ಎ ತೋಯ್ಬಾ ಹಾಗೂ ತಕ್ರೀಕ್ ಉಲ್ ಮುಜಾಹಿದನ್ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಇಬ್ಬರನ್ನ ಬಂಧಿಸಲಾಗಿದೆ. ನಾಕಾ ಬಂಧಿಯಲ್ಲಿ ತಪಾಸಣೆ ನಡೆಸುವ ವೇಳೆ ಇಬ್ಬರು ಉಗ್ರರು ಸಿಕ್ಕಿ ಬಿದ್ದಿದ್ದಾರೆ. ಉಗ್ರರಿಂದ ಸಂಘಟನೆಗೆ ಸೇರಿದ ಬಾವುಟ, ಬ್ಯಾನರ್ ಹಾಗೂ ಕೆಲವು ಕರಪತ್ರ ಮತ್ತು ಒಂದು ಲೆಟರ್ ಪ್ಯಾಡ್​ ವಶಕ್ಕೆ ಪಡೆಯಲಾಗಿದೆ.

ಪೊಲೀಸರ ಪ್ರಕಾರ, ಬುದ್ಗಾಂವ್​​ನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಈ ಇಬ್ಬರು ಆರೋಪಿಗಳು ಉಗ್ರರನ್ನ ಮತ್ತು ಕಾರ್ಮಿಕರನ್ನು ನೇಮಕ ಮಾಡುವಲ್ಲಿ ಸಕ್ರಿಯರಾಗಿದ್ದರು. ಅಲ್ಲದೆ ಮಧ್ಯ ಮತ್ತು ದಕ್ಷಿಣ ಕಾಶ್ಮೀರದ ವಿವಿಧ ಸ್ಥಳಗಳಲ್ಲಿ ಗಡಿಯುದ್ದಕ್ಕೂ ತಮ್ಮ ಹ್ಯಾಂಡ್ಲರ್‌ಗಳ ನಿರ್ದೇಶನದ ಮೇರೆಗೆ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಪೋಸ್ಟರ್‌ಗಳು, ಬ್ಯಾನರ್‌ಗಳು ಮತ್ತು ಧ್ವಜಗಳನ್ನು ತಯಾರಿಸುತ್ತಿದ್ದರು. ಪೊಲೀಸರು ಮತ್ತು ಭದ್ರತಾ ಪಡೆಗಳ ಸಮಯಪ್ರಜ್ಞೆಯಿಂದ ಈ ಪ್ರದೇಶದಲ್ಲಿ ನಡೆಯಬಹುದಾಗಿದ್ದ ಭಾರೀ ಉಗ್ರರ ದಾಳಿ ತಪ್ಪಿದೆ.

- Advertisement -

Related news

error: Content is protected !!