Tuesday, May 14, 2024
spot_imgspot_img
spot_imgspot_img

ಯಕ್ಷ ಬೆಸುಗೆಯ ಜಯಲಕ್ಷ್ಮಿ ರೈ ಅಡ್ಯನಡ್ಕರವರಿಗೆ ಪಟ್ಲ ಫೌಂಡೇಶನ್ ನ ವಿಟ್ಲ ಘಟಕದಿಂದ ಇಂದು ಸನ್ಮಾನ

- Advertisement -G L Acharya panikkar
- Advertisement -

“ಕಾಣು ವಿಜಯದ ಕನಸು ಯತ್ನದಲಿ ಸತ್ವವಿದೆ,ಪ್ರಯತ್ನವೇ ಮಹತ್ವ”. ಎನ್ನುತ್ತದೆ ಸುಭಾಷಿತ. ಕನಸು ಕಾಣುವ ಹಕ್ಕು ಸರ್ವರೀಗೂ ಸರ್ವ ಕಾಲಕು ವೇದ್ಯ. ಆದರೆ ನನಸು ಮಾಡಿಕೊಳ್ಳಲು ಎಲ್ಲರ ಸಹಕಾರ ಅಗತ್ಯ ಎನ್ನುವುದಕ್ಕಿಂತಲೂ ಸ್ವ ಆಸಕ್ತಿ ಮತ್ತು ಪ್ರಯತ್ನ ಅಗತ್ಯ. ಹವ್ಯಾಸ ಮತ್ತು ಅಭಿರುಚಿ ಸದಾ ಶ್ರಮಕ್ಕೆ ಪುಷ್ಟಿ ಕೊಡಬಲ್ಲುದು. ಜೀವನದಲ್ಲಿ ಅನಂತ ಕನಸುಗಳನ್ನು ಹೊತ್ತು ಭಾದಕಗಳನ್ನು ಅನುಭವಿಸಿ ಯಕ್ಷಗಾನ, ನಾಟಕ ಕಲೆಗೆ ನನ್ನದೊಂದಿಷ್ಟು ಸೇವೆಯಿರಲೆಂಬ ಫಲಾಪೇಕ್ಷೆ ಬಯಸದ ತೆರೆಮರೆಯ ಹವ್ಯಾಸಿ ಕಲಾವಿದೆಯರಲ್ಲಿ ಅಡ್ಯನಡ್ಕ ಜಯಲಕ್ಷ್ಮಿ ರೈ ಒಬ್ಬರು.


ಪರಿಸ್ಥಿತಿ ಸುಸ್ಥಿರತೆ ಇರದೆ ತರಗತಿ ಏಳರಲ್ಲಿ ವಿದ್ಯಾಭ್ಯಾಸಕ್ಕೆ ಚುಕ್ಕಿಯಿಡಬೇಕಾಯಿತು. “ಮುಂದೆ ಗುರಿಯಿತ್ತು ಹಿಂದೆ ಗುರುವಿದ್ದು” ಯಕ್ಷಗಾನ ಕಲೆ ತನ್ನನ್ನು ಆಕರ್ಷಿಸಿತು. ಉಂಡೆಮನೆ ಕೃಷ್ಣಭಟ್, ಉಡ್ಡoಗಳ ಬಾಲಕೃಷ್ಣ, ಗಣೇಶ ಪಾಲೆಚ್ಚಾರು ರವರ ಗರಡಿಯಲ್ಲಿ ಪಳಗಿ ಕೆ. ಟಿ ರತ್ನಾ ಟೀಚರ್ ರವರ ಮಾರ್ಗದರ್ಶನದಲ್ಲಿ ಯಕ್ಷಗಾನ ಹಾಸ್ಯಕ್ಕೆ ವೇಷ ತೊಡಲು ಸಿದ್ದರಾದರು. ಪಕ್ವತೆಯ ಖತಿಗೆ ಮನ ಮಾಡಿ ರಾಜವೇಷದವರೆಗೆ ತಲುಪಿದ ಅವರ ಆಸಕ್ತಿಗೆ, ತಾಳಮದ್ದಳೆಯ ಅರ್ಥಗಾರಿಕೆಗೆ ಖಂಡಿತ ನಾವು ಬೆರಗಾಗಬೇಕು. ಏಕಾದಶಿ ಮಹಾತ್ಮೆಯಿಂದ ತೊಡಗಿದ ಯಕ್ಷಪಯಣದಲ್ಲಿ ಬರೋಬ್ಬರಿ 80ಕ್ಕಿಂತಲೂ ಹೆಚ್ಚು ಬಾರಿ ವೇದಿಕೆಯೇರಿದವರು. ಮಕ್ಕಳಲ್ಲಿ ಯಕ್ಷಗಾನ ಆಸಕ್ತಿ ಮೂಡಿಸಲು ಅಡ್ಯನಡ್ಕದಲ್ಲಿ ಮಕ್ಕಳ ಯಕ್ಷಗಾನ ತಂಡವನ್ನು ಸಿದ್ದಗೊಳಿಸಿ ಹಲವು ಪ್ರದರ್ಶನ ನೀಡಿದ ಯಕ್ಷ ನಿರ್ದೇಶಕಿ ಎಂಬ ಪ್ರಶಂಸೆಗೆ ಪಾತ್ರರಾದವರು.

ಮಾತ್ರವಲ್ಲದೆ ತುಳು ನಾಟಕ “ಕಲ್ಜಿಗದಮಂತ್ರದೇವತೆ” ಯಲ್ಲಿ ಮಂತ್ರ ದೇವತೆ ಪಾತ್ರಕ್ಕೆ ಕಂಠದಾನ, ದೂರದರ್ಶನ ಹಾಗೇ ಚಿತ್ರರಂಗದ ಮೆಟ್ಟಲೇರಿದ ಹಿರಿಮೆಯಿದೆ. ಯಕ್ಷಗಾನ ಈಗೀಗ ಎಲ್ಲ ಕ್ಷೇತ್ರಗಳಂತೆ ಶ್ರೀಮಂತ ಕಲೆಯೇ. ಆದರೆ ಕಲಾವಿದರು ತನ್ನ ಕಲಾಸಾಧನೆಯಲ್ಲಿ ಸಿರಿವಂತರಾದರೂ ಆರ್ಥಿಕತೆಯಲ್ಲಿ ಇನ್ನೂ ಸಬಲರಾಗಿಲ್ಲವೆನ್ನುವುದಕ್ಕೆ ಜಯಲಕ್ಷ್ಮಿಯವರ ಬದುಕು ಸಾಕ್ಷಿ. ಪತಿ ಅಶೋಕ ರೈ ಚಾಲಕ ವೃತ್ತಿ ಮಾಡಿಕೊಂಡು, ಈರ್ವರು ಮಕ್ಕಳಾದ ಸಾನ್ವಿ ರೈ ಮತ್ತು ಆತ್ಮಿ ರೈ ವಿದ್ಯಾಭ್ಯಾಸ ಮಾಡುತ್ತಿರುವ ಇವರ ಕುಟುಂಬ ಇನ್ನೂ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದೆ ಎನ್ನುವುದು ಖೇದಕರ. ಯಕ್ಷಗಾನಕ್ಕೆ ಸಾಗರೊಪಾದಿಯಲ್ಲಿ ಅವಕಾಶ ಸೇವೆ, ಧನ ಪ್ರೋತ್ಸಾಹ ಮಾಡುತ್ತಿರುವ ಪಟ್ಲ ಸತೀಶಣ್ಣನ ಸಾರಥ್ಯದ ಪಟ್ಲ ಫೌಂಡೇಶನ್ ನ ವಿಟ್ಲ ಘಟಕದ 2024 ನೇ ಸಾಲಿನ ವಾರ್ಷಿಕೋತ್ಸವದ ಸಂದರ್ಭ ಇಂದು ಗುರುತಿಸಿ,ಗೌರವಿಸಲ್ಪಡುವ ಈ ಕಲಾವಿದೆಗೆ ನಮ್ಮೆಲ್ಲರ ಅಭಿನಂದನೆ ಇರಲಿ.

ಶ್ರೀ ಪಂಚಲಿಂಗೇಶ್ವರ ಸ್ವಾಮಿ ಅವರ ಕಲಾ ಸೇವೆಗೆ, ಕುಟುಂಬಕ್ಕೆ ಆಯುರಾರೋಗ್ಯ, ಸಂಪತ್ತು ಕರುಣಿಸಲಿ ಎಂದು ಹಾರೈಸೋಣ. ಶ್ರೀಮತಿ ಜಯಲಕ್ಷ್ಮಿ ಅಕ್ಕನಂತಹ ಯಕ್ಷಕಲಾ ಸಾಧಕರ ಬಾಳಿಗೆ ಯಕ್ಷ ಪ್ರೋತ್ಸಾಹಕರಾದ ನಾವು ಪ್ರೋತ್ಸಾಹಿಸೋಣವೇ?

🖊️ರಾಧಾಕೃಷ್ಣ ಎರುಂಬು.

- Advertisement -

Related news

error: Content is protected !!