Tuesday, April 23, 2024
spot_imgspot_img
spot_imgspot_img

ಲಾಕ್ ಡೌನೇ- ಲಸಿಕೆಯೇ.? -ಪಿ. ಜಯರಾಮ ರೈ

- Advertisement -G L Acharya panikkar
- Advertisement -

ಲೇಖನ:-ಪಿ.ಜಯರಾಮ ರೈ

ಸಾಮಾನ್ಯವಾಗಿ ಸಣ್ಣ ಮಕ್ಕಳು ಊಟ ಮಾಡದಿದ್ದಾಗ ಅಥವಾ ಹೇಳಿದಂತೆ ಕೇಳದಿದ್ದಾಗ ಅವರನ್ನು ಹೆದರಿಸಲು ಗುಮ್ಮ ಬರುತ್ತದೆ, ಪ್ರೇತ ಬರುತ್ತದೆ ಎಂಬೆಲ್ಲ ರೀತಿಯಲ್ಲಿ ಬೆದರಿಸಿ ಆ ಮೂಲಕ ಮಕ್ಕಳ ಮನಸ್ಸಿನಲ್ಲಿ ಭಯ ಹುಟ್ಟಿಸುವ ಮೂಲಕ ಅವರನ್ನು ತಾಯಿ/ಹಿರಿಯರು ಅವರ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುವುದು ಸಾಮಾನ್ಯ, ಆದರೆ ಆ ರೀತಿ ಭಯ ಹುಟ್ಟಿಸಿಯೇ ಮಗುವನ್ನು ನಿಯಂತ್ರಿಸುತ್ತಾ ಹೋದಲ್ಲಿ ಮುಂದೆ ಆ ಮಗು ಹೊರಗೆ ನೋಡುವಾಗ ಅಥವಾ ಮನೆಯೊಳಗೆ ಏನಾದರೂ ಶಬ್ದವಾದರೂ ಗುಮ್ಮ ಬಂತು ಅಂತ ಹೆದರಿ ಓಡುತ್ತದೆ, ಆ ಮೂಲಕ ಮುಂದೆ ಮಗು ಮಾನಸಿಕವಾಗಿ ಕುಗ್ಗಲು ಸಹ ಕಾರಣವಾಗುತ್ತದೆ. ಅದೇ ರೀತಿ ಇಂದು ಕೊರೋನಾ ಎಂಬುದು ಕಣ್ಣಿಗೆ ಕಾಣದ ವೈರಸ್ಸು, ಅದೇ ರೀತಿ ಅದು ಗಂಟಲು ದ್ರವ ಪರೀಕ್ಷೆಯಿಂದ ಪೊಸಿಟಿವ್ ಎಂಬುದರ ಹೊರತು ಕೊರೋನಾ ಕಾಯಿಲೆ ನಿಜವಾಗಿ ಇದೆಯೇ ಇಲ್ಲವೇ ಎಂಬುದನ್ನು ಸಹ ಸ್ಪಷ್ಟಪಡಿಸುವ ಲಕ್ಷಣಗಳು ಹೆಚ್ಚಿನ ಕೊರೋನಾ ರೋಗಿಗಳೆನ್ನುವವರಲ್ಲಿ ಕಂಡುಬಂದಿರುವುದಿಲ್ಲ,.

ಈ ಮೇಲೆ ಹೇಳಿದಂತೆ ಮಗುವನ್ನು ಹತೋಟಿಗೆ ತರಲು ಗುಮ್ಮ ಇದೆ ಎಂದು ಬೆದರಿಸುವ ಅದೆಷ್ಟೊ ತಾಯಂದಿರಿಗೆ ಅದರಿಂದ  ಮಗುವಿನ ಮೇಲೆ ಎಷ್ಟೊಂದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿದಿರುವುದಿಲ್ಲ, ಆದರೆ ಪರಿಜ್ಞಾನ ಉಳ್ಳ ತಾಯಿ/ಹಿರಿಯರು ಗುಮ್ಮ ಇದೆ ಎಂದು ಹೆದರಿಸಿ ಬೆದರಿಸುವ ಬದಲು ಮಗುವನ್ನು ಬೇರೆ ರೀತಿಯಿಂದ ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಅದೇ ರೀತಿ ಇವತ್ತು ಖ್ಯಾತ ವೈದ್ಯರುಗಳು ನೀಡುವ ಅಭಿಪ್ರಾಯ ಪ್ರಕಾರ ಸಹ ಕೊರೋನಾ ಎಂಬ ಕಾಯಿಲೆಯ ಬಗ್ಗೆ ಕೇವಲ ಬೆದರಿಸುವ ರೀತಿಯ ಪ್ರಚಾರ ಮಾಡಿ ಸಮಾಜವನ್ನು ಅಲ್ಲೋಲ್ಲ ಕಲ್ಲೋಲ್ಲ ಮಾಡುವ ಬದಲು ಜನರಿಗೆ ತಿಳುವಳಿಕೆ ನೀಡಿ ಆಹಾರ ಸೇವೆನೆಯಲ್ಲಿಯೇ ಅದನ್ನು ಹತೋಟಿಗೆ ತರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಅದೇ ರೀತಿ ಆಯುರ್ವೇದದಲ್ಲಿ ಕೊರೋನಾ ಕಾಯಿಲೆಯನ್ನು ಹಾಗೂ ಕಾಯಿಲೆಯೇ ಬರದಂತೆ ತಡೆಯುವ ಔಷಧಗಳಿದ್ದು, ಆ ಬಗ್ಗೆ ಖ್ಯಾತ ಆಯುರ್ವೇದ ತಜ್ಞ ಡಾ| ಗಿರಿಧರ ಕಜೆ ಯವರು ಶ್ರಮಪಟ್ಟು ತಯಾರಿಸಿದ ಔಷಧವನ್ನು ಸರಕಾರಕ್ಕೆ ಉಚಿತವಾಗಿ ನೀಡಿದರೂ ಅದನ್ನು ರೋಗಿಗಳಿಗೆ/ರೋಗ ಲಕ್ಷಣ ಇರುವವರಿಗೆ ಉಪಯೋಗಿಸಲು ಸರಕಾರವು ಹಿಂದೆಟ್ಟು ಹಾಕುತ್ತಿರುವುದು ತೀರಾ ವಿಷಾದನೀಯ, ಇವೆಲ್ಲವನ್ನು ಪರಿಗಣಿಸಿದಲ್ಲಿ ಸರಕಾರಕ್ಕೆ/ಸಂಬಂಧಪಟ್ಟವರಿಗೆ ಕೊರೋನಾ ಗುಣಮುಖವಾಗುವುದು ಮುಖ್ಯವಾಗಿರದೆ, ಕೊರೋನಾ ಪೀಡಿತರ ಸಂಖ್ಯೆಯನ್ನು ಹೆಚ್ಚು ಕಾಣಿಸಿ ಭಯ ಹುಟ್ಟಿಸುವುದೇ ಮುಖ್ಯವಾದಂತಿದೆ ಮತ್ತು ಆ ಮೂಲಕ ಸಾಮಾನ್ಯ ಜನರ ಜೀವನದಲ್ಲಿ ಆಟವಾಡುತ್ತಿರುವುದು ಮಾತ್ರವಲ್ಲದೇ ಇದರ ಹಿಂದೆಯು ಆಗಾಧವಾದ ದುರುದ್ದೇಶಪೂರಿತ ಸ್ವಾರ್ಥ ಸಾಧನೆ ಇದೆ ಎಂಬ ಸಂಶಯಕ್ಕೆ ಎಡೆ ಮಾಡಿರುವುದು ಹಗಲಿನಷ್ಟೆ ಸತ್ಯವಾಗಿ ಕಾಣುತ್ತಿದೆ.

ಕೊರೊನಾ ಎಂಬ ವೈರಾಣುವನ್ನು ಎದುರಿಸಬಲ್ಲ ಔಷಧ ಆಯುರ್ವೇದದಲ್ಲಿ ಸಿದ್ದವಿರುವುದಾದರೂ ಅದನ್ನು ಕಡೆಗಣಿಸಿ ಎಲ್ಲದಕ್ಕೂ ಲಾಕ್ ಡೌನೇ ಪರಿಹಾರವೆಂಬ ರೀತಿಯಲ್ಲಿ ಸರಕಾರ ವರ್ತಿಸುತ್ತಿರುವುದನ್ನು ಪರಿಗಣಿಸಿದಲ್ಲಿ ಮೇಲೆ ತಿಳಿಸಿದಂತೆ ತಾಯಿ ಮಗುವಿಗೆ ಉಣಿಸುವ ಸದುದ್ದೇಶದಿಂದ ಗುಮ್ಮ ಇದೆ ಎಂದು ಭಯಪಡಿಸುವುದಾಗಿರದೆ, ತಾಯಿ/ಹಿರಿಯರು ತಮ್ಮ ಯಾವುದೋ ಒಂದು ದುರುದ್ದೇಶ ಸಾಧನೆಗಾಗಿ ಮಗುವನ್ನು (ಜನ ಸಾಮಾನ್ಯರನ್ನು) ಬೆದರಿಸಿದಂತೆ ಕಂಡುಬರುತ್ತದೆ.ನಿದ್ದೆಯಲ್ಲಿದ್ದವರನ್ನು ಎಚ್ಚರಿಸಬಹುದು, ಆದರೆ ನಿದ್ದೆ ಬಂದವರಂತೆ ನಟಿಸುವವನ್ನು ಎಚ್ಚರಿಸಲು ಅಸಾಧ್ಯ, ಎಂಬಂತೆ ಇವತ್ತು ಮಾಧ್ಯಮಗಳಲ್ಲಿ ಎಲ್ಲೆಲ್ಲೊ ಕೊರೋನಾ ಎಂಬ ಕಾಯಿಲೆಯ ಬಗ್ಗೆ ವಿವಿಧ ರೀತಿಯ ಬಣ್ಣ ಬಣ್ಣದ ಮಾತು ಹಾಗೂ ಭಯ ಹುಟ್ಟಿಸುವ ಶಬ್ದಗಳನ್ನು ಉಪಯೋಗಿಸುವ ಮೂಲಕ ಜನರನ್ನು ಭಯಭೀತರನ್ನಾಗಿ ಮಾಡುವಲ್ಲಿಯೇ ತಲ್ಲೀನವಾಗಿವೆ ಹೊರತು ಸರಕಾರವಾಗಲೀ, ಮಾಧ್ಯಮವಾಗಲೀ ಕೊರೋನಾದಿಂದ ಜನ ಸಾಯುದಕ್ಕಿಂತ ಅಧಿಕ ಈ ಲಾಕ್ ಡೌನ್ ಅಥವಾ ಗಂಟೆಗೊಂದು ರೀತಿಯ ಕಾನೂನು/ನಿಯಮಕ್ಕೆ ಬೆಸೆತ್ತು ಜೀವಂತವಿದ್ದವರಂತೆ ಕಂಡರೂ ನಿಜವಾಗಿ ಜೀವನದಲ್ಲಿ ಸತ್ತವರು ಅದೆಷ್ಟೊ.

ಅದೇ ರೀತಿ ನಿಜವಾದ ಖಾಯಿಲೆಗೆ ಚಿಕಿತ್ಸೆ ದೊರೆಯದೆ ಸತ್ತವರು ಸಾವಿರಾರು, ಆದರೂ ಸರಕಾರ/ಸಂಬಂಧಪಟ್ಟವರು ಜನರಲ್ಲಿ ಲಾಕ್ ಡೌನ್ ಎಂಬ ಒಂದೇ ಅಸ್ತ್ರವನ್ನು ಉಪಯೋಗಿಸಿ ಅದೇ ಕೊರೋನಾ ಹೊಡೆದೊಡಿಸುವ ಅಸ್ತ್ರ ಎಂದು ತಿಳಿದುಕೊಂಡಂತೆ ನಟಿಸುತ್ತಿದೆ, ನಿಜವಾಗಿ ಕೊರೋನಾ ಪರಿಹಾರವಾಗಬೇಕೆಂದಿದಲ್ಲಿ ಆಯುರ್ವೇದ ವೈದ್ಯರು ಅಷ್ಟೊಂದು ಕಷ್ಟಪಟ್ಟು ತಯಾರಿಸಿ ಸರಕಾರಕ್ಕೆ ಉಚಿತವಾಗಿ ನೀಡಲು ತಯಾರಿದ್ದರೂ ಮತ್ತು ಅದು ಆಯುರ್ವೇದ ಔಷಧಿ ಆದ ಕಾರಣ ಅಡ್ಡ ಪರಿಣಾಮ ಆಗುವುದಿಲ್ಲ ಎಂಬುದು ತಿಳಿದ್ದಿದ್ದರೂ, ಅಷ್ಟೊಂದು ಪರಿಣಾಮಕಾರಿ ಔಷದಿಯನ್ನು ರೋಗಿಗಳಿಗೆ ಉಪಯೋಗಿಸದಿರಲು ಕಾರಣ ಮತ್ತು ಅದರ ಹಿಂದಿರುವ ಉದ್ದೇಶವಾದರೂ ಏನು?. ಇವೆಲ್ಲವನ್ನು ಕಂಡಾಗ ಬಹುಶಃ 2020ರಲ್ಲಿ ಇನ್ನು ಯಾವುದೇ ಕೆಲಸ/ಕಾರ್ಯಗಳ ಕಡೆ ಗಮನ ಹರಿಸದೆ, ಜನರ ಮುಂದೆ ಕೊರೋನಾ ಎಂಬ ಒಂದೇ ಅಸ್ತ್ರವನ್ನು ಉಪಯೋಗಿಸಿ ಆ ಮೂಲಕ ಆಡಳಿತ ನಡೆಸುವವರು ಅಥವಾ ಅವರ ದಲ್ಲಾಳಿಗಳು ಮಾತ್ರ ಬದುಕುವ ವ್ಯವಸ್ಥೆಯೊಂದನ್ನು ವ್ಯವಸ್ಥಿತಗೊಳಿಸಿ, ಸಾಮಾನ್ಯ ಜನರು ಹೇಗೆ ಸತ್ತರು ಅದು ಕೊರೋನಾದಿಂದ ಸತ್ತಿರುವುದು ಎಂದು ಲೆಕ್ಕ ತೋರಿಸಿ ಆ ಮೂಲಕವು ಲಾಭದ  ಲೆಕ್ಕಾಚಾರದಲ್ಲಿರುವುದು ಸ್ಪಷ್ಟ.

ಕಾರಣ ಸರಕಾರ/ಸಂಬಂಧಪಟ್ಟವರಲ್ಲಿ ನನ್ನದೊಂದು ಕಳಕಳಿಯ ಮನವಿ, ದಯವಿಟ್ಟು ನಿದ್ರೆ ಬಂದಂತೆ ನಟಿಸುವ, ಅಂದರೆ ಲಾಕ್ ಡೌನ್ ಎಂಬಿತ್ಯಾದಿ ಗಂಭೀರ ಶಬ್ದಗಳಿಂದ ಜನರನ್ನು Slow poison ಕೊಟ್ಟು ಕೊಳ್ಳುವ ಬದಲು ನಿಜವಾದ ನಿದ್ರೆಯಿಂದ ಎಚ್ಚೆತ್ತವರಂತೆ ವರ್ತಿಸಿ, ಡಾ| ಗಿರಿಧರ ಕಜೆಯಂತಹ ಆಯುರ್ವೇದ ವೈದ್ಯರು ತಿಳಿಸಿದಂತಹ ಔಷಧವನ್ನು ಸರಿಯಾಗಿ ರೋಗಿಗಳಿಗೆ ಉಪಯೋಗಿಸುವ ಮೂಲಕ ಕೊರೋನಾವೇ ರಾಜಕಾರಣಿಗಳಿಗೆ/ದಲ್ಲಾಳಿಗಳಿಗೆ ಬದುಕಲು ಅಥವಾ ಜನ ಸಾಮಾನ್ಯರಿಗೆ ಸಾಯಲು ಕಾರಣವಾಗದಂತೆ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ.

ಪಿ.ಜಯರಾಮ ರೈ

ನ್ಯಾಯವಾದಿ ಮತ್ತು ನೋಟರಿ

                 ಬಂಟ್ವಾಳ

- Advertisement -

Related news

error: Content is protected !!