ಬಂಟ್ವಾಳ: ಜೆಸಿಐ ಭಾರತದ ನಿರ್ದೇಶನದಂತೆ ಜೆಸಿಐ ಜೋಡುಮಾರ್ಗ ನೇತ್ರಾವತಿ ಬಿ.ಸಿರೋಡು
ಇದರ ವತಿಯಿಂದ, ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಶಂಭೂರು ಇದರ ಸಹಯೋಗದೊಂದಿಗೆ, ಬೊಂಡಾಲ ಪ್ರೌಢಶಾಲೆ ಯಲ್ಲಿ ರಾಷ್ಟ್ರೀಯ ಭಾವೈಕ್ಯತೆಯ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಲಾಯಿತು.
ಅಧ್ಯಕ್ಷರಾದ ಜೆಸಿ ಶೈಲಜಾ ರಾಜೇಶ್ ವಿದ್ಯಾರ್ಥಿಗಳಿಗೆ ಪ್ರಮಾಣವಚನ ವನ್ನು ವಾಚಿಸಿದರು ಮತ್ತು ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಪ್ರಾಮಾಣಿಕತೆಯ ಅಂಗಡಿ ತೆರೆದಿಟ್ಟುರುವುದಲ್ಲದೆ ಮಕ್ಕಳು ಬಹು ಉತ್ಸುಕತೆಯಿಂದ ಹಣ ಕೊಟ್ಟು ವಸ್ತುಗಳನ್ನು ತೆಗೆದುಕೊಂಡರು.
ಮಕ್ಕಳಿಗೆ ಆಶುಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಬಹಳ ಉತ್ತಮ ರೀತಿಯಲ್ಲಿ ಸ್ಪರ್ಧೆಯಲ್ಲಿ ಸ್ಪರ್ಧಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮದಲ್ಲಿ ಬೊಂಡಾಲ ಶಾಲೆಯ ಮುಖ್ಯ ಶಿಕ್ಷಕರು ಕಮಲಾಕ್ಷ ಕಲ್ಲಡ್ಕ ಹಾಗೂ ಜೆಸಿಐ ಜೋಡುಮಾರ್ಗ ನೇತ್ರಾವತಿಯ ಕಾರ್ಯದರ್ಶಿಯಾಗಿರುವಂತಹ ಮಲ್ಲಿಕಾ ಆಳ್ವ, ಕೋಶಾಧಿಕಾರಿ ಶಾಲಾ ಶಿಕ್ಷಕರು ಹರಿಪ್ರಸಾದ್ ಕುಲಾಲ್ ಮತ್ತು ಶಾಲಾ ಆಡಳಿತ ಮಂಡಳಿ ಉಪಸ್ಥಿತರಿದ್ದರು. ಜೆಸಿ ಹರಿಪ್ರಸಾದ್ ಕುಲಾಲ್ ಕಾರ್ಯಕ್ರಮ ವನ್ನು ನಿರೂಪಿಸಿ ,ವಂದಿಸಿದರು.