- Advertisement -
- Advertisement -
ವಿಟ್ಲ : ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಜೆ. ಎಫ್. ಎಸ್. ಅಡ್ವಾಕೇಟ್ ರೇಖೆಶ್ ಶರ್ಮ ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿದರು.
ಜೆಸಿಐ ವಿಟ್ಲ ವತಿಯಿಂದ 90ಸಾವಿರ ಮೌಲ್ಯದ ಶಾಶ್ವತ ಯೋಜನೆಯ ಹಸ್ತಾಂತರ ಕಾರ್ಯಕ್ರಮ ಆಗಸ್ಟ್ 21ರ ಬುಧವಾರ ನಡೆಯಿತು. ಈ ಸಂದರ್ಭ ವಲಯದ ಅಧ್ಯಕ್ಷ ಜೆಸಿ. ಸೇನೆಟರ್. ಅಡ್ವಾಕೇಟ್ ಗಿರೀಶ್ ಜೊತೆಗಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿ.ಸಂತೋಷ್ ಶೆಟ್ಟಿ ಪೆಲತಡ್ಕ ವಹಿಸಿದ್ದರು. ವಲಯ ಉಪಾಧ್ಯಕ್ಷ ರಾಕೇಶ್ ಹೊಸಬೆಟ್ಟು, ವಲಯದ ಅಧಿಕಾರಿಗಳು, ಜೇಸಿಸ್ ಶಾಲೆಯ ಅಧ್ಯಕ್ಷರು ಜೆಸಿ. ಶ್ರೀಧರ್ ಶೆಟ್ಟಿ, ಶಾಲೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಕಾರ್ಯದರ್ಶಿ ಮುರಳಿ ಪ್ರಸಾದ್,ಜೆಸಿಐ ವಿಟ್ಲದ ಪೂರ್ವ ಅಧ್ಯಕ್ಷರು, ಕಾರ್ಯಕ್ರಮದ ಸಂಯೋಜಕರಾದ ಲುವಿಶ್ ಮಸ್ಕ್ಯಾರೆನ್ಹಸ್ ಉಪಸ್ಥಿತರಿದ್ದರು.
- Advertisement -