Sunday, June 14, 2026
spot_imgspot_img
spot_imgspot_img

ಜೀಪ್ ಡಿಕ್ಕಿ; ಕರ್ತವ್ಯ ನಿರತ ಪೊಲೀಸರಿಬ್ಬರು ಸ್ಥಳದಲ್ಲೇ ಸಾವು

- Advertisement -
- Advertisement -

ಮೈಸೂರು(ನ.12): ಪೊಲೀಸ್ ಜೀಪ್​ವೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯ ನಿರತ ಪೊಲೀಸರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೆ.ಆರ್.ನಗರ ತಾಲೂಕಿನ ಸಿದ್ದನಕೊಪ್ಪಲು ಗೇಟ್ ಬಳಿ ನಡೆದಿದೆ.

ಎಎಸ್‌ಐ ಮೂರ್ತಿ(45) ಹಾಗೂ ಮುಖ್ಯಪೇದೆ ಶಾಂತಕುಮಾರ್(40) ಮೃತ ದುರ್ದೈವಿಗಳು.ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಮಧ್ಯರಾತ್ರಿ ಸಾಲಿಗ್ರಾಮದಿಂದ‌ ಕೆ.ಆರ್.ನಗರದ ಕಡೆ  ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಎಸ್‌ಪಿ ರಿಷ್ಯಂತ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!