Sunday, June 7, 2026
spot_imgspot_img
spot_imgspot_img

ಜಿಲೆಟಿನ್ ಸ್ಫೋಟ ಪ್ರಕರಣ- ಕಲ್ಲು ಕ್ವಾರಿ ಮಾಲಕನ ಬಂಧನ!

- Advertisement -
- Advertisement -

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಬಳಿ ಜಿಲಿಟಿನ್ ಸ್ಪೋಟ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಕಲ್ಲು ಕ್ವಾರಿ ಮಾಲೀಕನನ್ನು ಬಂಧಿಸಿದ್ದಾರೆ.

ಕಲ್ಲು ಕ್ವಾರಿ ಮಾಲೀಕ, ಬಿಜೆಪಿ ಮುಖಂಡ ನಾಗರಾಜ್ ನನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ತಲೆ ಮರೆಸಿಕೊಂಡಿದ್ದ ಮತ್ತೊರ್ವ ಆರೋಪಿ ಗಣೇಶ್ ನನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಿರೇನಾಗವೇಲಿ ಗ್ರಾಮದ ಬಳಿ ನಡೆದ ಜಿಲೆಟಿನ್ ಸ್ಪೋಟ ಪ್ರಕರಣದಲ್ಲಿ ಆರು ಮಂದಿ ಸಾವನ್ನಪ್ಪಿದ್ದರು.

- Advertisement -

Related news

error: Content is protected !!