Sunday, June 29, 2025
spot_imgspot_img
spot_imgspot_img

ಉಗ್ರರನ್ನು ಅಟ್ಟಾಡಿಸಿ ಕೊಲ್ಲುತ್ತೇವೆ; ಜೋ ಬೈಡೆನ್ ಶಪಥ

- Advertisement -
- Advertisement -

ಜನರ ಜೀವದೊಂದಿಗೆ ಆಟವಾಡುತ್ತಿರುವ ಉಗ್ರರು ಎಲ್ಲೆ ಅಡಗಿಕೊಂಡಿದ್ದರೂ ಅವರನ್ನು ಅಟ್ಟಾಡಿಸಿ ಮುಗಿಸುತ್ತೇವೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಪ್ರತಜ್ಞೆ ಮಾಡಿದ್ದಾರೆ. ಕಬೂಲ್ ಏರ್ಪೋರ್ಟ್ ಮೇಲಿನ ಆತ್ಮಾಹುತಿ ದಾಳಿಗೆ ಪ್ರತಿಕ್ರಿಯಿಸಿರುವ ಜೋ ಬೈಡೆನ್ ನೂರಾರು ಅಮಾಯಕರು ಪ್ರಾಣ ಕಳೆದುಕೊಳ್ಳುವುದಕ್ಕೆ ಉಗ್ರರೇ ಹೊಣೆ. ಅವರ ಎಲ್ಲೆ ಅಡಗಿದ್ದರು ಅವರನ್ನು ಬೇಟೆಯಾಡಿ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.

ಏರ್ಪೋರ್ಟ್ ಮೇಲೆ ಉಗ್ರರು ದಾಳಿ ನಡೆಸಿದ್ದರೂ ಆಘ್ಘಾನ್ ನಲ್ಲಿರುವ ಎಲ್ಲಾ ಅಮೆರಿಕನ್ನರು ಹಾಗೂ ವಿದೇಶಿಯರನ್ನು ಅಲ್ಲಿಂದ ಆಯಾ ದೇಶಗಳಿಗೆ ಸ್ಥಳಾಂತರಿಸುತ್ತೇವೆ ಎಂದು ಸವಾಲು ಹಾಕಿದ್ದಾರೆ. ಕಾಬೂಲ್ ಏರ್ಪೋರ್ಟ್ ಮೇಲಿನ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಸಂಘಟನೆಯೇ ಕಾರಣ ಆದರೆ, ಘಟನೆಯಲ್ಲಿ ತಾಲಿಬಾನಿಗಳ ಕೈವಾಡವಿರುವ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ. ಹೀಗಾಗಿ ಅಮೆರಿಕದ 12 ಸೇನಾ ಯೋಧರು ಸೇರಿದಂತೆ ನೂರಾರು ಮಂದಿಯ ಬಲಿ ಪಡೆದುಕೊಂಡಿರುವವರಿಗೆ ನಾವು ತಕ್ಕ ಪಾಠ ಕಲಿಸಿಯೇ ತೀರುತ್ತೇವೆ ಎಂದು ಅವರು ಭಾವುಕರಾಗಿ ಹೇಳಿಕೆ ನೀಡಿದ್ದಾರೆ.

ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿರುವ ಘಟನೆ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ನಮಗೆ ಖಚಿತ ಮಾಹಿತಿ ಲಭ್ಯವಿದೆ. ಇದರ ಆಧಾರದ ಮೇಲೆ ನಾವು ದಾಳಿ ನಡೆಸಿ ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದು ಅವರು ಗುಡುಗಿದ್ದಾರೆ. ಆಫ್ಘಾನ್ ತೊರೆಯಲು ಆ.31ರ ಗಡುವು ವಿಧಿಸಿದ್ದರೂ ಇನ್ನು ಅಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಮೆರಿಕನ್ನರು ಹಾಗೂ ಇನ್ನಿತರ ಹಲವಾರು ಮಂದಿ ಇದ್ದು ಅವರನ್ನೆಲ್ಲಾ ಸ್ಥಳಾಂತರಿಸಬೇಕಿದೆ. ಗಡುವಿನೊಳಗೆ ಆಫ್ಘಾನ್ ನಲ್ಲಿರುವ ಎಲ್ಲ ಅಮೆರಿಕನ್ನರನ್ನು ನರಕ ಸದೃಶ ದೇಶದಿಂದ ಸ್ಥಳಾಂತರಿಸುವ0ತೆ ಕೆಲ ರಿಪಬ್ಲಿಕನ್ ಸಂಸದರು ಬೈಡೆನ್ ಮೇಲೆ ಒತ್ತಡ ಹೇರಿದ್ದಾರೆ.

- Advertisement -

Related news

error: Content is protected !!