Sunday, July 19, 2026
spot_imgspot_img
spot_imgspot_img

ಜೋರ್ಡಾನ್ ಮೇಲೆ ಇರಾನ್ ದಾಳಿ – ಇಬ್ಬರು ಯುಎಸ್ ಸೈನಿಕರು ಸಾವು, ಓರ್ವ ನಾಪತ್ತೆ

- Advertisement -
- Advertisement -

ಟೆಹ್ರಾನ್: ಜೋರ್ಡಾನ್ ಮೇಲೆ ಇರಾನ್ ನಡೆಸಿದ ಭೀಕರ ದಾಳಿಗೆ ಇಬ್ಬರು ಯುಎಸ್ ಸೈನಿಕರು ಸಾವನ್ನಪ್ಪಿದ್ದು, ಓರ್ವ ನಾಪತ್ತೆಯಾಗಿದ್ದಾರೆ.

ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿಯನ್ನು ಎದುರಿಸುವಾಗ ಶುಕ್ರವಾರ ಜೋರ್ಡಾನ್‌ನಲ್ಲಿ ಇಬ್ಬರು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ದೃಢಪಡಿಸಿದೆ.

ಯುದ್ಧ ಪ್ರಾರಂಭವಾದ ದಿನದಿಂದ ಸಾವನ್ನಪ್ಪಿದ ಯುಎಸ್ ಸೈನಿಕರ ಒಟ್ಟು ಸಂಖ್ಯೆ 16 ಕ್ಕೇರಿದೆ. 430 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಾಲ್ವರು ಅಮೆರಿಕನ್ ಸೇವಾ ಸದಸ್ಯರನ್ನು ಜೋರ್ಡಾನ್‌ನ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಬಳಿಕ ನಾಲ್ವರನ್ನೂ ಡಿಸ್ಚಾರ್ಜ್‌ ಮಾಡಲಾಗಿದೆ.

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅಮೆರಿಕಗೆ ಎಚ್ಚರಿಕೆ ಸಂದೇಶ ರವಾನಿಸಿದ್ದು, ಇರಾನ್ ಮೇಲೆ ದಾಳಿ ಮುಂದುವರಿಸಿದರೆ ಅಮೆರಿಕಗೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ವಾರ್ನಿಂಗ್‌ ಕೊಟ್ಟಿದ್ದಾರೆ.

ಕುವೈತ್, ಇರಾಕ್, ಬಹ್ರೇನ್, ಜೋರ್ಡಾನ್ ಮತ್ತು ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಪ್ರತೀಕಾರದ ದಾಳಿ ನಡೆಸಿದೆ. ಶನಿವಾರ ಇರಾನ್ ನಡೆಸಿದ ದಾಳಿಯಿಂದ ಕುವೈತ್‌ ತೀವ್ರ ಹಾನಿಗೊಳಗಾಗಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!