- Advertisement -
- Advertisement -



ವಿಟ್ಲ: JCI ವಿಟ್ಲ ಆತಿಥ್ಯದಿಂದ ಮಧ್ಯಂತರ ಸಮ್ಮೇಳನ 2024 ತುಂತುರು ಕಾರ್ಯಕ್ರಮವು ಜೂನ್ 2 ರಂದು ಶತಮಾನೋತ್ಸವ ಸ್ಮಾರಕ ಭವನ ವಿಟ್ಲ ಇಲ್ಲಿ ನಡೆಯಲಿರುವುದು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ವಲಯಧ್ಯಕ್ಷರಾದ JCI SEN ADV ಗಿರೀಶ್ ಎಸ್.ಪಿ ನಡೆಸಲಿದ್ದಾರೆ. JCI SEN ದೀಪಕ್‌ರಾಜ್ ಇವರ ಅಧ್ಯಕ್ಷತೆಯಲ್ಲಿ ಜರಗುವ ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ JCI PPP ರಾಕೇಶ್ ಕುಂಜೂರ್, JCI PPP ಪುರುಷೋತ್ತಮ ಶೆಟ್ಟಿ ಹಾಗೂ JCI SEN ಲೋಕೇಶ್ ರೈ.ಕೆ ಭಾಗವಹಿಸಲಿದ್ದಾರೆ ಹಾಗೂ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ಗಂಟೆಯವರೆಗೆ ವಿವಿಧ ಮನೋರಂಜನಾ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ, ಸನ್ಮಾನ, ವಿವಿಧ ಸ್ಪರ್ಧೆಗಳು, ದಿಕ್ಸೂಚಿ ಭಾಷಣಗಳು ನಡೆಯಲಿದೆ ಎಂದು JEP ಸಂತೋಷ್ ಶೆಟ್ಟಿ ಅಧ್ಯಕ್ಷರು ಜೆಸಿಐ ಘಟಕ ವಿಟ್ಲ ಮತ್ತು ವಲಯ ಕಾರ್ಯದರ್ಶಿಗಳಾದ JCI PPP ಸೌಮ್ಯ ರಾಕೇಶ್ ಮಧ್ಯಂತರ ಸಮ್ಮೇಳನದ ರಾಯಭಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -