


ಕಾರ್ತಿಕೇಯ ಕುಣಿತ ಭಜನಾ ತಂಡ ನೆಕ್ಕಿತ್ತಪುಣಿ ಅಳಿಕೆ ಮತ್ತು ಪ್ರೀತಿದಪೂ ಕಲಾಕುಸುಮ, ಪಿಲಿನಲಿಕೆ ಅಶ್ವಥಕೋಡಿ ಕನ್ಯಾನ ಇದರ ಆಶ್ರಯದಲ್ಲಿ “ಕೆಸರ್‌ದ ಕಂಡಡ್ ಒಂಜಿ ದಿನ” ಕಾರ್ಯಕ್ರಮ ಜುಲೈ 6-7-2025ನೇ ಆದಿತ್ಯವಾರ ಬೆಳಿಗ್ಗೆ 9:00 ಗಂಟೆಗೆ ಸಣ್ಣಗುತ್ತು ಗದ್ದೆಯಲ್ಲಿ ನಡೆಯಲಿದೆ.

ಬೆಳಿಗ್ಗೆ 9:30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಚಂದ್ರಶೇಖರ ಮಡಿಯಾಲ ಕಾರ್ನಾವರು ಶ್ರೀ ಬೊಳ್ನಾಡು ಚೀರುಂಬ ಭಗವತೀ ಕ್ಷೇತ್ರ ಎರುಂಬು ಅಳಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದ.ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಸಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದರು ಮತ್ತು ಗುರುಗಳು, ಪೆರ್ಲ ಸಬ್ಬಣಕೋಡಿ ರಾಮಭಟ್ಟ ಇವರ ಸಭಾಧ್ಯಕ್ಷತೆ ವಹಿಸಲಿದ್ದಾರೆ.
ಉದ್ಯಮಿ ಪ್ರಭಾಕರ ಶೆಟ್ಟಿ ದಂಬೆಕಾನ, ಅಳಿಕೆ ಕೃಷಿಪತ್ತಿನ ಸಹಕಾರಿ ಸಂಘ ನಿರ್ದೇಶಕ ಚಂದ್ರನಾಥ ಆಳ್ವ, ಮಿತ್ತಳಿಕೆ, ಚಂದಾಡಿ ಶ್ರೀಮತಿ ಸಾಯಿಗೀತಾ ವಿ. ಹೆಗ್ಡೆ, ಅಳಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸರೋಜಿನಿ, ಬಂಟ್ವಾಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಲೀಲಾವತಿ ರಾಮ ಗೌಡ, ಅಳಿಕೆ ಶ್ರೀ ಸತ್ಯಸಾಯಿ ಲೋಕಾಸೇವಾ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಈಶ್ವರ ನಾಯ್ಕ, ವಿದ್ಯಾಗಿರಿಸ್ವಾಮಿ ಕೊರಗಜ್ಜ ಕ್ಷೇತ್ರ ಆಡಳಿತ ಮೊಕ್ತೇಸರರಯ ನಾರಾಯಣ ಮೂಲ್ಯ, ಮಡಿಯಾಲ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆಡಳಿತ ಮೋಕ್ತೇಸರರು ಗೋವಿಂದ ಪ್ರಕಾಶ್ ವದ್ವ, ಅಳಿಕೆ ನಿವೃತ್ತ ಮುಖ್ಯ ಶಿಕ್ಷಕ ಯಶೋಧರ ಬಂಗೇರ, ವಿಠಲ ಪ್ರೌಢಶಾಲೆ ವಿಟ್ಲ ದೈಹಿಕ ಶಿಕ್ಷಕಿ ಕು| ಜೀವನ್ಯ, ವಿಠಲ ಪ್ರೌಢಶಾಲೆ ವಿಟ್ಲ ಮುಖ್ಯ ಶಿಕ್ಷಕ ಕಿರಣ್ ಕುಮಾರ್, ಸಮಾಜ ಸೇವಕ ಬಾಲಕೃಷ್ಣ ಸಣ್ಣಗುತ್ತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸಂಜೆ 4:00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅಳಿಕೆ ಕೃಷಿಪತ್ತಿನ ಸಹಕಾರಿ ಸಂಘ ಅಧ್ಯಕ್ಷ ರೂಪೇಶ್ ರೈ ಅಳಿಕೆ ಗುತ್ತು, ಅಳಿಕೆ ಕೃಷಿಪತ್ತಿನ ಸಹಕಾರಿ ಸಂಘ ನಿರ್ದೇಶಕ ಕಾನ ಈಶ್ವರ ಭಟ್, ಮಡಿಯಾಲ ಸುರೇಶ್ ಭಟ್, ಅಳಿಕೆ ಶ್ರೀ ಪಿಲಿಚಾಮುಂಡಿ (ಕಲ್ಲೆಂಚಿನಾಯ) ಗ್ರಾಮ ದೈವಸ್ಥಾನ ಕಲ್ಲೆಂಚಿಪಾದೆ ಮೊಕ್ತೇಶರರು ವೆಂಕಟೇಶ ಭಟ್, ಅಳಿಕೆ ಕೃಷಿಪತ್ತಿನ ಸಹಕಾರಿ ಸಂಘ ಅಳಿಕೆ ಮಾಜಿ ನಿರ್ದೇಶಕ ತಿಮ್ಮಪ್ಪ ಶೆಟ್ಟಿ ಅಳಿಕೆಗುತ್ತು, ಗ್ರಾಮ ಪಂಚಾಯತ್ ಸದಸ್ಯ ಸದಾಶೀವ ಶೆಟ್ಟಿ ಅಳಿಕೆ, ಧಾರ್ಮಿಕ ಮುಖಂಡ ಮೋಹನದಾಸ್ ರೈ ಎರುಂಬು, ಓಜಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸಂಜೀವ ಮಿತ್ತಳಿಕೆ, ಬೆಂಗಳೂರು ಉದ್ಯಮಿ ದಿನೇಶ್ ಗೌಡ ಮಠ, ರಫೀಕ್ ಅಂಗ್ರಿ, ಮಡಿಯಾಲ ಸಾಯಿಕೃಷ್ಣ ಸೇವಾ ಬಳಗ ಅಧ್ಯಕ್ಷ ಅವಿನಾಶ್ ಮಡಿಯಾಲ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸ್ಪರ್ಧೆಗಳು:
ಸಾರ್ವಜನಿಕರಿಗೆ
*ನಿಧಿ ಶೋಧನೆ ದಂಪತಿ ಓಟ
1 ರಿಂದ 3
*ಓಟ
*ಬಾಲ್ ಪಾಸಿಂಗ್
*ಬಕೇಟ್‌ಗೆ ಬಾಲ್ ಹಾಕುವುದು.
4 ರಿಂದ 7( ಹುಡುಗರು)
*ಓಟ
*ಹಾಳೆ ಏಳೆಯುವುದು
*ತಿರುಗಿ ಓಡುವುದು
*ಮಡಕೆ ಒಡೆಯುವುದು
4 ರಿಂದ 7( ಹುಡುಗಿಯರು)
*ಸಂಗೀತ ಕುರ್ಚಿ
*ಓಟ
*ಹಾಳೆ ಏಳೆಯುವುದು
*ಮಡಿಕೆ ಒಡೆಯುವುದು
8 ರಿಂದ 10 (ಹುಡುಗರು)
*ಮೂರು ಕಾಲಿನ ಓಟ
*ಓಟ
*ಉಪ್ಪುಗೋಣಿ ಓಟ
*ಮಡಿಕೆ ಒಡೆಯುವುದು
8 ರಿಂದ 10 (ಹುಡುಗಿಯರು)
*ಮೂರು ಕಾಲಿನ ಓಟ
*ಓಟ
*ಉಪ್ಪುಗೋಣಿ
*ಮಡಿಕೆ ಒಡೆಯುವುದು
ಪುರುಷರಿಗೆ
*ಓಟ
*ಉಪ್ಪುಗೋಣಿ
*ಮಡಿಕೆ ಒಡೆಯುವುದು
*ಹಗ್ಗಜಗ್ಗಾಟ
ಮಹಿಳೆಯರಿಗೆ
*ಓಟ
*ಉಪ್ಪುಗೋಣಿ
*ಮಡಿಕೆ ಒಡೆಯುವುದು
*ಹಗ್ಗಜಗ್ಗಾಟ
ವಿಶೇಷ ಸೂಚನೆ:
*ಮಧ್ಯಾಹ್ನ ಊಟದ ವ್ಯವಸ್ಥೆ ಇದೆ.
*ಆಟೋಟ ಸ್ಪರ್ಧೆಗಳು ಸಮಯಕ್ಕೆ ಸರಿಯಾಗಿ ನಡೆಸಲಾಗುವುದು.
*ತೀರ್ಪುಗಾರರ ತೀರ್ಮಾನವೇ ಅಂತಿಮ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9945991741,9845744134,7022962561