- Advertisement -
- Advertisement -
ಮಂಗಳೂರು: ಕರ್ನಾಟಕ ರಾಜ್ಯದ ವಕ್ಫ್ ಬೋರ್ಡ್ ನ ಅಧ್ಯಕ್ಷರು ಮುಸ್ಲಿಂ ಸಮುದಾಯದ ಅಗ್ರಗಣ್ಯ ನಾಯಕರೂ ಆಗಿರುವಂತಹ ಡಾ. ಮುಹಮ್ಮದ್ ಯೂಸುಫ್ ಸಾಹೇಬ್ ರವರ ನಿಧನಕ್ಕೆ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯು ತೀವ್ರವಾಗಿ ಸಂತಾಪವನ್ನು ವ್ಯಕ್ತಪಡಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಕಣಚೂರು ಮೋನು ಹಾಜಿಯವರು, ಯೂಸುಫ್ ಹಾಜಿಯವರು ಮುಸ್ಲಿಂ ಸಮುದಾಯಕ್ಕೆ ನೀಡಿದಂತಹ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ವಕ್ಫ್ ನ ಅಭಿವೃದ್ಧಿಗಾಗಿ ಸಾಕಷ್ಟು ದುಡಿದು ಇನ್ನು ಕೂಡಾ ವಕ್ಫ್ ಗೆ ಸಂಬಂಧಪಟ್ಟಂತೆ ಹಲವಾರು ಕೆಲಸ ಕಾರ್ಯಗಳಲ್ಲಿ ಮುಂದುವರಿಯುತ್ತಿದ್ದರು.
ಈ ಒಂದು ಕಾಲದಲ್ಲಿ ಅವರ ಅಗಲುವಿಕೆಯು ಸಮಾಜಕ್ಕೆ ಹಾಗೂ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.ಅವರಿಗೆ ಅಲ್ಲಾಹು ಮಗ್ಫಿರತ್ ಕರುಣಿಸಲಿ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
- Advertisement -