




ಕಬಕ: 78 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶ್ರೀ ಮಹಾದೇವಿ ಯುವಕ ಮಂಡಲದ ವತಿಯಿಂದ ಶ್ರೀ ಮಹಾದೇವಿ ದೇವಸ್ಥಾನದ ವಠಾರದಲ್ಲಿ ನಿವೃತ್ತ ಯೋಧರಾದ ಶಿವಪ್ರಕಾಶ್ ಕೆ.ವಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಶಿವಪ್ರಕಾಶ್ ಕೆ.ವಿ ಮಾತನಾಡಿ ದೇಶವನ್ನು ಕಾಯುವ ಕೆಲಸ ಕೇವಲ ಸೈನಿಕರದು ಮಾತ್ರವಲ್ಲ ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವು ಕೂಡ ಆಗಿದೆ ಎಂದು ಶುಭನುಡಿದರು. ಕಾರ್ಯಕ್ರಮದ ಅಧಯಕ್ಷತೆಯನ್ನು ವಹಿಸಿದ ವಿ. ಚಂದ್ರಶೇಖರ ನಾಯ್ಕ್ ಮಾತನಾಡಿ ಬ್ರಿಟಿಷರು ಭಾರತ ಬಿಟ್ಟು ತೊಲಗುವಾಗ ಭಾರತವನ್ನು ಪ್ರಾಂತವಾರುಗಳಾಗಿ ವಿಂಗಡಿಸಲಾಯಿತು. ಈಗ ಅಲ್ಲಿ ಪ್ರಾಂತವಾರುಗಳು ನಮಗೆ ದೇಶದ ಅಖಂಡತೆಗೆ ಭಂಗವನ್ನು ಉಂಟುಮಾಡುತ್ತಿದೆ. ಜಾಗೃತ ಸಮಾಜ ಜಾತಿ ,ಮತ, ಧರ್ಮ ಬದಿಗಿರಿಸಿ ಏಕತೆಯಿಂದ ದೇಶದ ಒಳಿತಿಗಾಗಿ ಹೊರಡುವ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಆದ್ದರಿಂದ ಎಲ್ಲಾ ಹಿಂದೂಗಳು ಒಟ್ಟಾಗಿ ಭಾರತವನ್ನು ಮತ್ತೆ ಜಗದ್ವಂಡಿಯ ಮಾಡುವ ಶಪಥ ತೊಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬೆಳ್ಳಿ ಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯರಾಮ್ ನೆಕ್ಕರೆ, ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಅಡ್ಯಾಲು, ಕಾರ್ಯದರ್ಶಿ ಯತೀಶ್ ಪದ್ನಡ್ಕ, ರವೀಂದ್ರ ಮೇಲಾಂಟ, ಲೋಕೇಶ್ ಬಾಕಿಮಾರ್, ಸುಕೇಶ್ ಅಡ್ಯಾಲು, ವಸಂತ್ ನೆಕ್ಕರೆ, ಕೃಷ್ಣಪ್ಪ ಅಡ್ಯಾಲು, ಜಗದೀಶ್ ಬಾಕಿಮಾರ್, ಕಿರಣ್ ಅಡ್ಯಾಲು, ಹರ್ಷಿತ್ ಕಬಕ, ಮಿಥುನ್ ಬಾಕೀಮರ್, ಕೇಶವ ಕಲ್ಲಂದಡ್ಕ, ಗಣೇಶ್ ಪದ್ನಡ್ಕ ಮಹಿಳಾ ಮಂಡಲ ಅಧ್ಯಕ್ಷೆ ಭಾರತಿ ಕಬಕ, ಪೂರ್ಣಿಮಾ ಕಬಕ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಾಲಕೃಷ್ಣ ಅನುಗ್ರಹ ನಿರೂಪಿಸಿರು, ರಕ್ಷಿತ್ ಅಡ್ಯಾಲು ವಂದಿಸಿದರು.