- Advertisement -




- Advertisement -
ಕಬಕ: ದೇಶದ ಪ್ರಧಾನಮಂತ್ರಿ ನರೇಂದ್ರ ದಾಮೋದರದಾಸ್ ಮೋದಿಯವರ 73ನೇ ಜನ್ಮದಿನದ ಪ್ರಯುಕ್ತ ಕಬಕ ಮಹಾದೇವಿ ದೇವಸ್ಥಾನದಲ್ಲಿ ಅವರ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಮತ್ತು ಮುಂದಿನ ಚುನಾವಣೆಯಲ್ಲೂ ದೇಶದ ಚುಕ್ಕಾಣಿ ಹಿಡಿಯುವ ಶಕ್ತಿ ಅವರಿಗೆ ಮಹಾದೇವಿ ಅನುಗ್ರಹಿಸಲಿ ಎಂದು ಕುಂಕುಮಾರ್ಚನೆ ಸೇವೆ ಮಾಡುದರ ಮೂಲಕ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಎಸ್.ಟಿ ಮೋರ್ಚ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಬಿಜತ್ರೆ, ಪುಣಚ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ದಯಾನಂದ ಶೆಟ್ಟಿ, ಮಾಣಿಲ ಬಿಜೆಪಿ ಪ್ರಮುಖರಾದ ಗೀತಾನಂದ ಶೆಟ್ಟಿ, ರಾಜೇಶ್ ಬಾಳೆಕಲ್ಲು, ಕಬಕ ಶಕ್ತಿ ಕೇಂದ್ರದ ಜಯರಾಮ್ ನೆಕ್ಕರೆ, ಪಂಚಾಯತು ಸದಸ್ಯರಾದ ರುಕ್ಮಯ್ಯ ಗೌಡ, ಯತೀಶ್ ಪದ್ನಡ್ಕ, ವಿಟ್ಲ ಮುಡ್ನೂರು ಪಂ.ಅಧ್ಯಕ್ಷ ಪುನೀತ್ ಮಾಡತ್ತಾರು,ಕಿಶೋರ್ ನಾಟೆಕಲ್ಲು ಮೊದಲಾದವರು ಉಪಸ್ಥಿತರಿದ್ದರು.
- Advertisement -