- Advertisement -
- Advertisement -





ಕಡಬ: ಪಂಜ ವಲಯ ಅರಣ್ಯ ಅಧಿಕಾರಿಗಳ ತಂಡ ದಾಳಿ ನಡೆಸಿ ಕಡಬದ ನೂಜಿಬಾಳ್ತಿಲ ಎಂಬಲ್ಲಿ ಮನೆ ಫ್ರಿಡ್ಜ್‌ನಲ್ಲಿ ಅಕ್ರಮವಾಗಿ ಇಟ್ಟಿದ್ದ ಕಾಡು ಪ್ರಾಣಿಯ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪಂಜ ವಲಯ ಅರಣ್ಯಾಧಿಕಾರಿ ಸಂಧ್ಯಾ ಅವರ ತಂಡ ಕಾರ್ಯಾಚರಣೆ ನಡೆಸಿದೆ. ನೂಜಿಬಾಳ್ತಿಲ ಗ್ರಾಮದ ಪಟ್ಟಣ ತೇಗಿಲ್ ಕಳಜಾಲು ನಿವಾಸಿ ವರ್ಗಿಸ್ ತೋಮಸ್ ಎಂಬುವವರಿಗೆ ಸೇರಿದ ಮನೆಯ ಪ್ರಿಡ್ಜ್‌ನಲ್ಲಿ ಸುಮಾರು 10 ಕೆಜಿ ಕಾಡುಪ್ರಾಣಿ ಮಾಂಸ ಪತ್ತೆಯಾಗಿದೆ.ಜೊತೆಗೆ ಮನೆಯಲ್ಲಿದ್ದ ಬಂದೂಕು ವಶ ಪಡಿಸಿಕೊಳ್ಳಲಾಗಿದೆ. ಆರೋಪಿ ಪರಾರಿಯಾಗಿದ್ದು, ಪ್ರಕರಣ ದಾಖಲು ಮಾಡಲಾಗಿದೆ. ಪಂಜ ಉಪ ವಲಯ ಅರಣ್ಯಾಧಿಕಾರಿ ಅಜಿತ್, ಸುನಿಲ್, ಯಶೋಧರ ಮೊದಲಾದವರು ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
- Advertisement -