Monday, June 30, 2025
spot_imgspot_img
spot_imgspot_img

ಕಡಬ: ವಿದ್ಯುತ್ ಕಂಬದಲ್ಲಿ ದುರಸ್ತಿ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಗಂಭೀರ

- Advertisement -
- Advertisement -

ಕಡಬ: ವಿದ್ಯುತ್ ಕಂಬದಲ್ಲಿ ದುರಸ್ತಿ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಒಬ್ಬರು ಗಂಭೀರ ಗಾಯಗೊಂಡ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಎಂಬಲ್ಲಿ ನಡೆದಿದೆ.

ಗಾಯಗೊಂಡ ಲೈನ್ ಮ್ಯಾನ್ ಅನ್ನು ಬಾಗಲಕೋಟೆ ಜಿಲ್ಲೆಯ ದ್ಯಾಮಣ್ಣ‌ ದೊಡ್ಮನಿ ಎಂದು ಗುರುತಿಸಲಾಗಿದೆ. ದ್ಯಾಮಣ್ಣ ಅವರು ತಲೆಕ್ಕಿ ಬಳಿ ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದ ವೇಳೆ ಹಠಾತ್ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ‌ ಎನ್ನಲಾಗಿದೆ.

ಬಳಿಕ ಸ್ಥಳೀಯರು ಮರದ ಕೋಲಿನ ಸಹಾಯದಿಂದ ಮೇಲಿನಿಂದ ಅವರನ್ನು ಕೆಳಗಿಳಿಸಿದ್ದು ಬಳಿಕ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಆಗಮಿಸಿದ್ದು, ಹೆಚ್ಚಿನ ಮಾಹಿತಿ ‌ನಿರೀಕ್ಷಿಸಲಾಗಿದೆ.

- Advertisement -

Related news

error: Content is protected !!