Saturday, June 28, 2025
spot_imgspot_img
spot_imgspot_img

ಕಡಬ: ಬಾರ್‌ನ ಕಿಟಕಿ ಮೂಲಕ ಮದ್ಯ ಮಾರಾಟ ಮಾಡುತ್ತಿರುವ ಆರೋಪ; ಪೊಲೀಸರು ಆಗಮಿಸುತ್ತಿದ್ದಂತೆ ಕಾಲ್ಕಿತ್ತ ಮದ್ಯಪ್ರಿಯರು

- Advertisement -
- Advertisement -

ಕಡಬ: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಮದ್ಯದಂಗಡಿಗಳು ಮುಚ್ಚಲ್ಪಟ್ಟಿದೆ. ಆದರೆ ಕಡಬ ಸರ್ಕಾರಿ ಆಸ್ಪತ್ರೆ ಹಿಂಭಾಗ ಇರುವ ಬಾರ್ ರೆಸ್ಟೋರೆಂಟ್ ನಲ್ಲಿ ಕಿಟಕಿ ಮೂಲಕ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ಮಾಧ್ಯಮದವರು ತೆರಳಿ ರಹಸ್ಯ ಕಾರ್ಯಾಚರಣೆಗೆ ಮುಂದಾಗಿದ್ದರು. ಕೆಲವರು ಬಾರ್ ರೆಸ್ಟೋರೆಂಟ್ ಗೇಟ್ ಮುಚ್ಚಿದ್ದ ಕಾರಣ ಕಂಪೌಂಡ್ ಹಾರಿ ಕಿಟಕಿ ಮೂಲಕ ಮದ್ಯ ಪಡೆಯಲು ಪ್ರಯತ್ನಿಸಿದ್ದರು. ಇದೆಲ್ಲವೂ ವೀಡಿಯೋದಲ್ಲಿ ಸೆರೆಹಿಡಿಯಲಾಗಿತ್ತು. ಕೆಲ ಸಮಯದ ಬಳಿಕ ಅನುಮಾನಗೊಂಡ ಬಾರ್ ಸಿಬ್ಬಂದಿ ಕಿಟಕಿ ಬಾಗಿಲು ತೆರೆಯಲಿಲ್ಲ.

ಈ ನಡುವೆ ಮಾಹಿತಿ ತಿಳಿದು ಕಡಬ ಪೊಲೀಸರು ಆಗಮಿಸುತ್ತಿದ್ದಂತೆ ಬಾರ್ ಸಮೀಪ ಇದ್ದ ಮದ್ಯಪ್ರಿಯರು ಪೊಲೀಸ್‌ ವಾಹನ ಕಂಡು ಸ್ಥಳದಿಂದ ಕಾಲ್ಕಿತ್ತ ಪ್ರಸಂಗ ನಡೆಯಿತು. ಕೆಲ ಮಾಹಿತಿ ಪ್ರಕಾರ ಕಳೆದೆರಡು ದಿನಗಳಿಂದಲೂ ಇಲ್ಲಿ ನಿರಂತರವಾಗಿ ದುಪ್ಪಟ್ಟು ಹಣಕ್ಕೆ ಮದ್ಯ ಮಾರಾಟವಾಗುತ್ತಿತ್ತು ಎನ್ನಲಾಗಿದೆ. ಪೊಲೀಸರು ವಿವಿಧ ಕಡೆ ಹದ್ದಿನ ಕಣ್ಣು ಇಟ್ಟಿದ್ದಾರೆ.

- Advertisement -

Related news

error: Content is protected !!