- Advertisement -
- Advertisement -



ಕಡಬ: ಹಿಟಾಚಿಯನ್ನು ಲೋಡ್ ಮಾಡಿ ನಿಲ್ಲಿಸಲಾಗಿದ್ದ ಟಿಪ್ಪರ್‌ನಿಂದ ಬ್ಯಾಟರಿ, ಟೂಲ್ಸ್ ಸೇರಿದಂತೆ ಹಲವು ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ಕಡಬ ಠಾಣಾ ವ್ಯಾಪ್ತಿಯ ಬಿಳಿನೆಲೆ ಎಂಬಲ್ಲಿ ನಡೆದಿದೆ.
ಬಿಳಿನೆಲೆಯ ಶಿವದೇವ್ ಸಂಸ್ಥೆಗೆ ಸೇರಿದ ಟಿಪ್ಪರ್ ಹಾಗೂ ಹಿಟಾಚಿಯನ್ನು ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮೈದಾನದಲ್ಲಿ ನಿಲ್ಲಿಸಲಾಗಿತ್ತು. ಈ ವೇಳೆ ಕಳ್ಳರು ಟಿಪ್ಪರ್‌ನಲ್ಲಿದ್ದ ಎರಡು ಬ್ಯಾಟರಿ, ಸುಮಾರು 60 ಲೀಟರ್ ಡೀಸೆಲ್, ವಾಹನದ ಲೈಟ್‌ಗಳು, ಜಾಕ್ ಸೇರಿದಂತೆ ಟೂಲ್ಸ್ ಗಳನ್ನು ಹೊತ್ತೊಯ್ದಿದ್ದಾರೆ.
- Advertisement -