Friday, April 26, 2024
spot_imgspot_img
spot_imgspot_img

ಕಡಬ: ಬೈಕ್‌ಗೆ ಡಿಕ್ಕಿ ಹೊಡೆದ ಕಾರು; ಸವಾರಿಗೆ ಗಂಭೀರ ಗಾಯ

- Advertisement -G L Acharya panikkar
- Advertisement -

ಕಡಬ: ಬೈಕಿಗೆ ಕಾರೊಂದು ಢಿಕ್ಕಿಯಾಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಕಡಬ- ಸುಬ್ರಹ್ಮಣ್ಯ ರಸ್ತೆಯ ಮರ್ಧಾಳದಲ್ಲಿ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಬಂಟ್ರ ಗ್ರಾಮದ ಕಂಪ ತುಂಬಿ ಮನೆ ನಿವಾಸಿ ಮೋನಪ್ಪ ಗೌಡ (60) ಎಂದು ಗುರುತಿಸಲಾಗಿದೆ.

ಕಲ್ಲಾಜೆಯಿಂದ ಕಡಬ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಮರ್ಧಾಳ ಜಂಕ್ಷನ್ ಬಳಿಯ ತಿರುವಿನಲ್ಲಿ ಬೈಕಿಗೆ ಢಿಕ್ಕಿ ಹೊಡೆದಿದೆ. ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!