Sunday, May 19, 2024
spot_imgspot_img
spot_imgspot_img

ಕಡಬ: ಸ್ಕೂಟರ್ ಬೈಕ್ ನಡುವೆ ಢಿಕ್ಕಿ..!

- Advertisement -G L Acharya panikkar
- Advertisement -

ಕಡಬ: ಸ್ಕೂಟರ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರೆ ಮತ್ತು ಸಹ ಸವಾರೆ ಗಾಯಗೊಂಡ ಘಟನೆ ಕಡಬದ ಹೆಚ್‌ಪಿ ಪೆಟ್ರೋಲ್‌ ಪಂಪ್‌ ಬಳಿ ನಡೆದಿದೆ.

ರೆಂಜಿಲಾಡಿ ಗ್ರಾಮದ ಅಣ್ಣಮ್ಮ ಎಂಬವರು ತನ್ನ ಮಗಳು ಡೈನಿ ರವರೊಂದಿಗೆ ಕಡಬ ಪೇಟೆಗೆ ಬಂದು ಸ್ಕೂಟರ್ ನಲ್ಲಿ ವಾಪಾಸು ರೆಂಜಿಲಾಡಿ ಕಡೆಗೆ ಹೋಗುತ್ತಿರುವಾಗ ಸುಬ್ರಹ್ಮಣ್ಯದಿಂದ ಕಡಬ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ಢಿಕ್ಕಿ ಹೊಡೆದಿದೆ.

ಬೈಕ್ ಸವಾರನು ಅಜಾಗರೂಕತೆಯಿಂದ ಮೋಟಾರ್ ಸೈಕಲನ್ನು ರಸ್ತೆಯ ತೀರ ಎಡಬದಿಗೆ ಚಲಾಯಿಸಿಕೊಂಡು ಬಂದು ಸ್ಕೂಟರ್ ಗೆ ಡಿಕ್ಕಿಯನ್ನುಂಟು ಮಾಡಿದ ಪರಿಣಾಮ ಸವಾರೆ ಮತ್ತು ಸಹಸವಾರೆ ಸ್ಕೂಟರ್ ಸಮೇತ ರಸ್ತೆಗೆ ಬಿದ್ದುಇಬ್ಬರೂ ಗಾಯಗೊಂಡು ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!