Thursday, March 28, 2024
spot_imgspot_img
spot_imgspot_img

ಕಡಬ: ಮಸಾಜ್ ಸೆಂಟರ್‌ನಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ; ಮಸಾಜ್ ಸೆಂಟರ್ ಮಾಲಕನ ಬಂಧನ

- Advertisement -G L Acharya panikkar
- Advertisement -

ಕಡಬ : ಕಡಬದ ಕಳಾರ ಸಮೀಪ ಸ್ನೇಹಾ ಆಯುರ್ವೇದಿಕ್ ಪಂಚಕರ್ಮ ಚಿಕಿತ್ಸಾಲಯ ಎಂಬ ಹೆಸರಿನ ಮಸಾಜ್ ಪಾರ್ಲರ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದ್ದು, ಆರೋಪಿಗಳನ್ನ ಬಂಧಿಸಿದ ಘಟನೆ ನಡೆದಿದೆ.

ಕೇರಳ ಮೂಲದ ವಯನಾಡ್ ನಿವಾಸಿ ಅಬ್ರಹಾಂ ಎಂಬಾತ ನಡೆಸುತ್ತಿದ ಮಸಾಜ್ ಪಾರ್ಲರ್ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದು, ಆಕೆ ವಿರೋಧ ವ್ಯಕ್ತಪಡಿಸಿದ ಸಂಧರ್ಭ ವೀಡಿಯೋ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಬ್ಬರು ಕಡಬ ಠಾಣೆಗೆ ದೂರು ನೀಡಿದ್ದರು. ಸ್ಥಳಕ್ಕೆ ತೆರಳಿದ ಕಡಬ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತರನ್ನು ಪಾರ್ಲರ್ ಮಾಲಕ ಅಬ್ರಹಾಂ, ಅನೀಶ್, ಹಾಗೂ ಕೇರಳ ಮೂಲದ 25 ವರ್ಷದ ಯುವತಿ ಎಂದು ಗುರುತಿಸಲಾಗಿದೆ. ಹೊರ ಊರುಗಳಿಂದ ಮಸಾಜ್ ನೆಪದಲ್ಲಿ ಯುವತಿಯರನ್ನು ಕರೆಸಿಕೊಂಡು ಲೈಂಗಿಕವಾಗಿ ಬಳಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ.

driving
- Advertisement -

Related news

error: Content is protected !!