Tuesday, April 30, 2024
spot_imgspot_img
spot_imgspot_img

ಅಪರಿಚಿತನೊಬ್ಬ ಯುವತಿಯ ಮೊಬೈಲ್ ಎಗರಿಸಿ ಎಸ್ಕೇಪ್ !!

- Advertisement -G L Acharya panikkar
- Advertisement -

ಕಡಬ (ಅ.23): ಅಪರಿಚಿತನೊಬ್ಬ ಮೊಬೈಲ್ ಎಗರಿಸಿ ಎಸ್ಕೇಪ್ ಆಗಿದ್ದು ಈ ದೃಶ್ಯ ಸಮೀಪದ ಅಂಗಡಿಯೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಕಡಬ ಪೇಟೆಯ ಪಂಜ ಕ್ರಾಸ್ ಬಳಿಯಿರುವ ಟಿ.ಸಿ ಪಾಯಿಂಟ್ ಬಳಿ ಯುವತಿಯೊಬ್ಬಳ ಮೊಬೈಲ್ ಸೆಟ್ ಎಗರಿಸಿ ಹೋಗಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಡಬ ಪೇಟೆಯ ಪಂಜ ಕ್ರಾಸ್ ಸಮೀಪದ ಟಿಸಿ ಪಾಯಿಂಟ್ ಬಳಿ ಯುವತಿ ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿಯತ್ತ ಹೋಗುವ ಸರ್ಕಾರಿ ಬಸ್​​​ ಹತ್ತುವ ವೇಳೆ ಚಾಲಕಿ ಕಳ್ಳ ಮೊಬೈಲ್ ಎಗರಿಸಿದ್ದಾನೆ.

ಯುವತಿಯ ಹಿಂಬದಿಯಿಂದ ಬಸ್ ಏರಿದ ಕಳ್ಳ ಕೆಂಪು ಚೆಕ್ಸ್ ಶರ್ಟ್ ಧರಿಸಿ ಕೈಯಲ್ಲಿ ಬ್ಯಾಗ್ ಹಿಡಿದಿದ್ದು. ಮೊಬೈಲ್ ಎಗರಿಸಿ ಕೂಡಲೇ ಬಸ್​​ನಿಂದ ಇಳಿದು ಹೋಗುವ ದೃಶ್ಯ ಸಿಸಿಟಿವಿ ಪುಟೇಜ್ ನಲ್ಲಿದೆ.
ಕೂಡಲೇ ಕಡಬ ಪೇಟೆಯಾದ್ಯಂತ ಈತನಿಗಾಗಿ ಹುಡುಕಾಟ ನಡೆಸಿದರೂ ಕಳ್ಳನ ಪತ್ತೆಯಾಗಿಲ್ಲ.

ಕಡಬ ಪೇಟೆಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ ಅಳವಡಿಸಿದರೂ ಈ ಕ್ಯಾಮರಾಗಳು ಇದೀಗ ಕಡಬದಲ್ಲಿ ನಡೆಯುವ ಅಕ್ರಮಗಳನ್ನು ಪತ್ತೆ ಹಚ್ಚಲು ಯೋಗ್ಯವಲ್ಲದ ರೀತಿಯಲ್ಲಿ ಇವೆ ಎನ್ನಲಾಗಿದೆ. ಇವನ್ನು ಸರಿಪಡಿಸಲು ಸಂಬಂಧಿಸಿದ ಇಲಾಖೆಗಳು ಮುಂದಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಈತನ ಗುರುತು ಯಾರಿಗಾದರೂ ಲಭ್ಯವಾದರೆ ಕಡಬ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ವಾಟ್ಸಪ್ ಸಂದೇಶ ನೀಡಲಾಗಿದೆ.

- Advertisement -

Related news

error: Content is protected !!